ನ್ಯೂಸ್

ತಾಯಿ, ಮಗಳ ಮೇಲೆ ಬಿದ್ದ ಗೋಡೆ, ಪ್ರಾಣಾಪಾಯದಿಂದ ಪಾರು

ಶಿವಮೊಗ್ಗ: ರಾಗಿಗುಡ್ಡ ಶಾಂತಿನಗರ ಬಡಾವಣೆಯಲ್ಲಿ ಶನಿವಾರ ಮುಂಜಾನೆ ಮನೆ ಗೋಡೆ ಕುಸಿದು ತಾಯಿ ಹಾಗೂ ಮಗಳು ಗಾಯಗೊಂಡಿದ್ದಾರೆ. ಭವಾನಿರಾವ್ ಅವರ ಪತ್ನಿ ಉಮಾ ಹಾಗೂ ಪುತ್ರಿ ಕಾವ್ಯಾ ತೀವ್ರವಾಗಿ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾರೀ ಮಳೆಯಿಂದ ತೇವಗೊಂಡಿದ್ದ ಮನೆ ಗೋಡೆ ಬೆಳಗಿನ ಕುಸಿದು ಅವಘಡ ಸಂಭವಿಸಿದೆ. ಮನೆಯ ಹಾಲ್‌ನಲ್ಲಿ ಮಲಗಿದ್ದ ಕುಟುಂಬದ ಸದಸ್ಯರು ಬಿದ್ದ ಗೋಡೆಯ ಅವಶೇಷಗಳಡಿ ಸಿಲುಕಿದ್ದಾರೆ. ತಕ್ಷಣವೇ ಸ್ಥಳೀಯರು ಹರಸಾಹಸ ನಡೆಸಿ ಕುಟುಂಬದವರನ್ನು ರಕ್ಷಿಸಿದ್ದಾರೆ. ಉಮಾ ಅವರಿಗೆ ಕೈಕಾಲು ಹಾಗೂ ಸೊಂಟಕ್ಕೆ ಪೆಟ್ಟಾಗಿದೆ. ಕಾವ್ಯಾಗೆ ಭುಜದ ಮೂಳೆ ಮುರಿದಿದೆ. ಮೆಗ್ಗಾನ್ ಆಸ್ಪತ್ರೆಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ. ಕಾಂತೇಶ್, ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ, ಉಪಮೇಯರ್ ಶಂಕರ್ ಗನ್ನಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.