ನ್ಯೂಸ್

ಶಾಲೆ ಕಟ್ಟಲು ಬರೀ ರೂ. 20 ಸಾವಿರ ಕೊಟ್ರು !

ಶಿವಮೊಗ್ಗ: ಮಾಠ-ಮಂತ್ರ ನಿವಾರಣೆ ಮಾಡುತ್ತಾರೆಂದು ನಮ್ಮದೇ ಸಮಾಜದ ಮುಖಂಡರು ಸ್ವಾಮೀಜಿಯೊಬ್ಬರಿಗೆ 4 ಲಕ್ಷ ರೂ. ಗುರುಕಾಣಿಗೆ ಕೊಟ್ಟರು. ಆದರೆ ನಾನು ಸಮಾಜದ ಮಕ್ಕಳಿಗಾಗಿ ಶಾಲೆ ಕಟ್ಟುತ್ತಿದ್ದೇನೆಂದು ಬಾಯಿ ಬಿಟ್ಟು ಬೇಳಿದ್ದಕ್ಕೆ ಕೇವಲ 20 ಸಾವಿರ ರೂ. ಕೊಟ್ಟರು ಎಂದು ಕನಕ ಪೀಠದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.

ಕನಕನಗರದ ಶ್ರೀ ಬೀರಲೀಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ಶ್ರೀ ಬೀರಲಿಂಗೇಶ್ವರ ಭಕ್ತ ಮಂಡಳಿಯಿಂದ ಬೀರಪ್ಪ ದೇವರ ಭಂಡಾರ ಜಾತ್ರೆಯಲ್ಲಿ ಜೋಗತಿಯವರಿಗೆ ಉಡಿ ತುಂಬಿ ಆಶೀರ್ವಚನ ನೀಡಿದ ಅವರು, ಮಾಠ-ಮಂತ್ರದಿಂದ ಏನೂ ಆಗಲ್ಲ. ಮನೆಯೊಳಗೆ ಭಂಡಾರ, ಕಂಬಳಿ ಮತ್ತು ಬೆತ್ತ ಇಟ್ಟುಕೊಂಡರೆ ಯಾವ ಮಠಮಂತ್ರಗಳ ಪ್ರಭಾವವೂ ಬೀರುವುದಿಲ್ಲ ಎಂದರು.

ಸ್ವಲ್ಪ ದಿನದ ಹಿಂದೆ ಕುರುಬ ಸಮಾಜದ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಅಲ್ಲಿ ವೇದಿಕೆ ಮೇಲಿದ್ದ ಸ್ವಾಮೀಜಿಯೊಬ್ಬರಿಗೆ ಅವರು ಕೇಳದೇ ಇದ್ದರೂ ಲಕ್ಷ ಲಕ್ಷ ರೂ. ಗುರುದಕ್ಷಿಣೆ ಕೊಟ್ಟರು. ಆದರೆ ನಾನು ಬಾಯಿ ಬಿಟ್ಟು ಬೇಳಿದರೂ ಅಲ್ಪ ಮೊತ್ತ ನೀಡಿದರು. ಮಾಠ-ಮಂತ್ರ, ಅಂತ್ರ-ತಂತ್ರಗಳನ್ನು ದೂರ ಮಾಡುತ್ತಾರೆಂದು ಅಷ್ಟೊಂದು ಹಣ ನೀಡಿದರು. ನಮ್ಮ ವ್ಯವಸ್ಥೆ ಹೇಗಿದೆ ಎಂಬುದಕ್ಕೆ ಇದು ಕೈಗನ್ನಡಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.