ಜವಳಿ ವರ್ತಕರ ಸಂಘದಿಂದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನೂತನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಾದ ಬಿ.ಗೋಪಿನಾಥ್, ಜಿ.ವಿಜಯಕುಮಾರ್, ಮನೋಹರ್, ಸುಕುಮಾರ್, ಎ.ಎಂ.ಸುರೇಶ ಅವರನ್ನು ಅಭಿನಂದಿಸಲಾಯಿತು. ಸುರೇಶ್‌ಕುಮಾರ್ ಬೇದ್ರೆ, ಪ್ರಭಾಕರ್ ಇತರರಿದ್ದರು. 
ನ್ಯೂಸ್

ಶೀಘ್ರದಲ್ಲಿ ಶಿವಮೊಗ್ಗ ಹಬ್ಬ ಆಯೋಜನೆ

ಶಿವಮೊಗ್ಗ: ಜವಳಿ ವರ್ತಕರ ಸಂಘದಿಂದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನೂತನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳನ್ನು ಬುಧವಾರ ಅಭಿನಂದಿಸಲಾಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಶಿವಮೊಗ್ಗ ಹಬ್ಬ ಆಯೋಜಿಸುವ ಗುರಿ ಹೊಂದಲಾಗಿದೆ. ವ್ಯಾಪಾರ, ಕೈಗಾರಿಕೆ, ಪ್ರವಾಸೋದ್ಯಮ ಮುಂತಾದ ಹಲವಾರು ಆಯಾಮಗಳಲ್ಲಿ ಶಿವಮೊಗ್ಗವನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡುವ ಆಸೆಯಿದೆ ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಮನೋಹರ್, ಸುಕುಮಾರ್ ಅವರನ್ನು ಅಭಿನಂದಿಸಲಾಯಿತು. ಜವಳಿ ವರ್ತಕರ ಸಂಘದ ಅಧ್ಯಕ್ಷ ಸುರೇಶ್‌ಕುಮಾರ್ ಬೇದ್ರೆ, ಕಾರ್ಯದರ್ಶಿ ಪ್ರಭಾಕರ್, ಪ್ರಮುಖರಾದ ಅನಿಲ್‌ಕುಮಾರ್ ಎಚ್.ಶೆಟ್ಟರ್, ರಾಕೇಶ್ ಸಾಕ್ರೆ ಇತರರಿದ್ದರು.