ನ್ಯೂಸ್

ಶಿವಮೊಗ್ಗದಲ್ಲಿ ಮಾರ್ಜಲಗಳಿಗೆ ಪ್ರಾಣಿಪ್ರಿಯರು ಫಿದಾ

ಶಿವಮೊಗ್ಗ: ನಗರದ ಬಿ.ಎಚ್.ರಸ್ತೆಯ ಸೇಕ್ರೇಟ್ ಹಾರ್ಟ್ ಚರ್ಚ್ ಆವರಣದಲ್ಲಿ ಶನಿವಾರ ಬಗೆ ಬಗೆಯ ಮಾರ್ಜಾಲಗಳು ಪ್ರಾಣಿ ಪ್ರೀಯರ ಕಣ್ಮನ ಸೆಳೆದವು. ಅವುಗಳ ನಡೆ, ಹಾವ-ಭಾವ, ನೋಟ, ತುಂಟಾಟಕ್ಕೆ ಪ್ರೇಕ್ಷಕರು ಫಿದಾ ಆದರು.

ಶಿವಮೊಗ್ಗ ಗೇಟ್‌ವೇ ಕ್ಯಾಟ್ ಕ್ಲಬ್‌ನಿಂದ ಆಯೋಜನೆಗೊಂಡಿದ್ದ ಮೊಟ್ಟ ಮೊದಲ ಮಾರ್ಜಾಲ ಪ್ರರ್ದಶನದಲ್ಲಿ ನೆಚ್ಚಿನ ಬೆಕ್ಕುಗಳನ್ನು ಪ್ರೇಕ್ಷಕರು ಎತ್ತಿ ಮುದ್ದಾಡಿ ಸಂಭ್ರಮಿಸಿದರು. ವಿವಿಧ ತಳಿಯ ಬೆಕ್ಕುಗಳ ಪ್ರದರ್ಶನ ಪ್ರಾಣಿ ಪ್ರೀಯರ ಕಣ್ಮನ ಸೆಳೆಯಿತು. ಮುದ್ದಾದ ಬೆಕ್ಕುಗಳ ಚಾಕಚಕ್ಯತೆ ಮತ್ತು ಬುದ್ಧಿಮತ್ತೆಗೆ ನೆರೆದಿದ್ದ ಪ್ರೇಕ್ಷಕರು ಮನ ಸೋತರು.

ನಗರದ ಸೇಕ್ರೆಟ್‌ಹಾರ್ಟ್ ಚರ್ಚ್ ಆವರಣದಲ್ಲಿ ಶನಿವಾರ ರಾಜ್ಯಮಟ್ಟದ ವಿವಿಧ ತಳಿಯ ಬೆಕ್ಕುಗಳ ಪ್ರದರ್ಶನದಲ್ಲಿ ಬಗೆ ಬಗೆಯ ಮಾರ್ಜಾಲಗಳು ಪ್ರಾಣಿಪ್ರೀಯರನ್ನು ಬೆರಗು ಮೂಡಿಸಿದವು. ಪರ್ಶಿಯನ್, ಬೆಂಗಾಲ್, ಹಿಮಾಲಯನ್, ಸ್ಥಳೀಯ ಇಂಡಿಮೋ, ಕ್ಲಾಸಿಕ್ ಸೇರಿ 150ಕ್ಕೂ ಅಧಿಕ ತಳಿಯ ಬೆಕ್ಕುಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದವು. ಬೆಂಗಳೂರು, ಹಾಸನ, ಮೈಸೂರು, ಚಿಕ್ಕಮಗಳೂರು, ಗದಗ, ಹಾವೇರಿ, ದಾವಣಗೆರೆ ಸೇರಿ ರಾಜ್ಯದ ಹಲವು ಜಿಲ್ಲೆಗಳಿಂದ ಬೆಕ್ಕುಗಳು ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರೇಕಕರನ್ನು ರಂಜಿಸಿದವು.

ಇದರಲ್ಲಿ 1.5 ಲಕ್ಷ ರೂ.ನ ಮೈನ್‌ಕೂನ್, 2.5 ಲಕ್ಷ ರೂ. ಮೌಲ್ಯದ ಬ್ಲಾಕ್ ಸ್ಮೋಕ್ ಮೈನ್‌ಕೂನ್ ತಳಿ, ಒಂದು ಲಕ್ಷ ರೂ. ಮೌಲ್ಯದ ಬೆಂಗಾಲ್ ತಳಿಯ ಮಾರ್ಜಾಲ ನೋಡುಗರ ಹುಬ್ಬೇರಿಸುವಂತೆ ಮಾಡಿದವು.