ನ್ಯೂಸ್

​ ನಟಿ ಶಿಲ್ಪಾ ಶೆಟ್ಟಿ ತಾಯಿ ಆಸ್ಪತ್ರೆಗೆ ದಾಖಲು! Shilpa Shetty

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ತಾಯಿ ಸುನಂದಾ ಶೆಟ್ಟಿ ಅನಾರೋಗ್ಯದ ಹಿನ್ನಲೆಯಲ್ಲಿ ಗುರುವಾರ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಶಿಲ್ಪಾ ಅಲ್ಲಿಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.

ಶಿಲ್ಪಾ ಅವರು ಆಸ್ಪತ್ರೆಗೆ ಆಗಮಿಸಿದ ವಿಡಿಯೋವನ್ನು ಇನ್​ಸ್ಟಾಗ್ರಾಮ್​ ಬಳಕೆದಾರ ಪಾಪರಾಜೋ ಭಯಾನಿ ಹಂಚಿಕೊಂಡಿದ್ದು, ಶಿಲ್ಪಾಶೆಟ್ಟಿ ಮುಂಬೈನ ಖಾಸಗಿ ಆಸ್ಪತ್ರೆಗೆ ಬಂದಿದ್ದಾರೆ, ಅಲ್ಲಿ ಅವರ ತಾಯಿಯನ್ನು ದಾಖಲಿಸಲಾಗಿದೆ. ಬೇಗ ಗುಣಮುಖರಾಗಿ ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಲಯನ್ಸ್ ಕ್ಲಬ್‌ನಿಂದ ಸಮಾನತೆಯ ಆಚರಣೆ : ಜಿಲ್ಲಾ ಗವರ್ನರ್ ಅರವಿಂದ ಶೆಣೈ ಬಣ್ಣನೆ ಈ ವರ್ಷದ ಜೂನ್​ ತಿಂಗಳಲ್ಲಿ ನಟಿ ತನ್ನ ತಾಯಿಗೆ ಶುಭಾಶಯಗಳನ್ನು ಕೋರಿದ್ದು, ಶಿಲ್ಪಾ ಇನ್‌ಸ್ಟಾಗ್ರಾಮ್‌ನಲ್ಲಿ "ಹ್ಯಾಪಿ ಬರ್ತ್‌ಡೇ ಅಮ್ಮಾ, ನಿಮ್ಮ ಅಪ್ಪುಗೆಗಳು ನನಗೆ ಅತ್ಯಂತ ಪ್ರಿಯವಾಗಿವೆ. ನಿಮ್ಮ ನಿರಂತರ ಪ್ರಾರ್ಥನೆ, ಪ್ರೀತಿ ಮತ್ತು ಹಾಸ್ಯಕ್ಕೆ ಧನ್ಯವಾದಗಳು. ನಾನು ನಿಮ್ಮ ಆಶೀರ್ವಾದದಲ್ಲಿ ತೇಲಿದ್ದೇನೆ. ನೀವು ಉತ್ತಮ ಆರೋಗ್ಯ ಪಡೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಬರೆದು ಪೋಸ್ಟ್​ ಮಾಡಿದ್ದರು.

ಶಿಲ್ಪಾ ಶೆಟ್ಟಿ ಮುಂಬರುವ ಚಿತ್ರಗಳಾವುವು?

ನಟಿ ಶಿಲ್ಪಾ ಶೆಟ್ಟಿ ಸಧ್ಯ ಕೆಡಿ: ದಿ ಡೆವಿಲ್​ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಧ್ರುವ ಸರ್ಜಾ, ಸಂಜಯ್ ದತ್, ವಿ. ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ, ಜಿಶು ಸೇನ್‌ಗುಪ್ತಾ ಮತ್ತು ನೋರಾ ಫತೇಹಿ ಕೂಡ ನಟಿಸಿದ್ದಾರೆ.

ಶಿಲ್ಪಾ ದಂಪತಿ ವಿರುದ್ಧ 60 ಕೋಟಿ ಹಗರಣ

ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ಅವರಿಗೆ ಸಂಬಂಧಿಸಿದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ನಲ್ಲಿ 60 ಕೋಟಿ ರೂ. ಹೂಡಿಕೆ ಮಾಡಲು ತಮ್ಮನ್ನು ಪ್ರೇರೇಪಿಸಲಾಯಿತು ಮತ್ತು ಹಣವನ್ನು ವೈಯಕ್ತಿಕ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಉದ್ಯಮಿ ದೀಪಕ್ ಕೊಠಾರಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಈ ಕುರಿತು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

(ಏಜೆನ್ಸೀಸ್​)