ಅಶ್ಲೀಲ ಸಿನಿಮಾಗಳನ್ನು ಚಿತ್ರೀಕರಿಸಿ, ಅದನ್ನು ವಿವಿಧ ಆ್ಯಪ್ಗಳ ಮೂಲಕ ವಿತರಣೆ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಮುಂಬೈ ಪೊಲೀಸರು ರಾಜ್ ಕುಂದ್ರಾ ಅವರನ್ನು ಬಂಧಿಸಿದ್ದರು. ಮುಂಬೈ ಪೊಲೀಸರಿಗೆ ಈ ಬಗ್ಗೆ ಅನುಮಾನವಿತ್ತು. ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ ನಂತರ 2011ರ ಜುಲೈ 19 ರಂದು ರಾಜ್ ಅವರನ್ನ ಬಂಧಿಸಲಾಗಿತ್ತು.
ಇದೀಗ ನಿನ್ನೆಯಿಂದ ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದೆ ಏನು ಅಂತೀರಾ ರಾಜ್ ಶಿಲ್ಪಾ ಸೆಟ್ಟಿಗೆ ಡಿವೋರ್ಸ್ ನೀಡಿದ್ದಾರೆ. ರಾಜ್ ಕುಟುಂಬದ ಮರಿಯಾದೆಯನ್ನ ಹಾಳು ಮಾಡಿದ್ದು, ಅವರಿಬ್ಬರ ಮಧ್ಯೆ ಪರಸ್ಪರ ಹೊಂದಾಣಿಕೆ ಇಲ್ಲ. ಹಾಗಾಗಿ ರಾಜ್ ಡಿವೋರ್ಸ್ ನೀಡಿದ್ದಾರೆ ಎನ್ನಲಾಗಿದೆ.
ಆದ್ರೆ ಶಿಲ್ಪಾ ಶೆಟ್ಟಿ ರಾಜ್ ಕೈ ಬಿಟ್ಟಿಲ್ಲ. ಪತಿಯ ಮಾಸ್ಕ್ ಪ್ರತಿಭಟನೆಗೂ ಜತೆಯಾಗಿ ರಾಜ್ನಂತೆಯೇ ಮಾಸ್ಕ್ ಧರಿಸಿ ಇತ್ತೀಚೆಗೆ ಇಬ್ಬರೂ ಮಾಧ್ಯಮಗಳಿಗೆ ಪೋಸ್ ನೀಡಿದ್ದರು. ಆದ್ರೆ ರಾಜ್ ಮಧ್ಯರಾತ್ರಿ ಮಾಡಿರುವ ಆ ಒಂದು ಟ್ವೀಟ್ ಇವರಿಬ್ಬರ ಸಂಬಂಧ ಇಲ್ಲಿಗೆ ಕೊನೆಗೊಂಡಿದೆ ಎಂದು ಖಚಿತ ಪಡಿಸುತ್ತಿದೆ.
ಇವರಿಬ್ಬರೂ ಡಿವೋರ್ಸ್ ಕೊಟ್ಟೇ ಬಿಟ್ರಾ ಎಂಬ ಗಾಸಿಪ್ ಇದೀಗ ಹರಿದಾಡುತ್ತಿದ್ದು, ರಾಜ್ ಕುಂದ್ರಾ ಏಕಾಏಕಿ ರಾಜ್ ಎಕ್ಸ್(ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ನಿನ್ನ ರಾತ್ರಿ ಮಾಡಿದ ಪೋಸ್ಟ್ ಸದ್ಯ ದೊಡ್ಡ ಮಟ್ಟಿನ ಚರ್ಚೆಯ ವಿಷಯ ವಾಗಿದೆ. ನಿನ್ನೆ ರಾತ್ರಿ 12:57 ಕ್ಕೆ ರಾಜ್ 'ನಾವು ಬೇರೆಯಾಗಿದ್ದೇವೆ ಇಂತಹ ಸಂದರ್ಭದಲ್ಲಿ ನಮಗೆ ಸಮಯ ನೀಡಿ' ಎಂದು ತಮ್ಮ ಅಧಿಕೃತ ಎಕ್ಸ್ ಹಿಂದಿನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನ ಹಾಕಿದ್ದಾರೆ.
‘ಬೇರೆ ಆಗಿದ್ದೀರಿ ಎಂದರೆ ಏನು ಅರ್ಥ? ವಿಚ್ಛೇದನವೇ’ ಎಂದು ಕೆಲವರು ಕಮೆಂಟ್ ಮಾಡಿದ್ರೆ, ಮಧ್ಯರಾತ್ರಿ ರಾಜ್ ಈ ರೀತಿಯಾಗಿ ಕುಡಿದ ಮತ್ತಿನಲ್ಲಿ ಮಾಡಿರಬಹುದು ಎಂದುಕೊಂಡಿದ್ದಾರೆ.
ಆದ್ರೆ ಈ ಬಗ್ಗೆ ಶಿಲ್ಪಾ ಶೆಟ್ಟಿ ಯಾವುದೇ ಪ್ರತಿಕ್ರಿತಯೆ ನೀಡಿಲ್ಲ. ಹಾಗಾಗಿ ಇವರಿಬ್ಬರೂ ವಿಚ್ಛೇದನ ನೀಡಿದ್ದಾರೋ ಇಲ್ಲವೋ ಯಾವುದೇ ಅಧಿಕೃತ ಮಾಹಿತಿ ಈವರೆಗೂ ದೊರೆತಿಲ್ಲ.