ಹಾವೇರಿ: ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಉಪಚುನಾಚಣೆ ಹಿನ್ನಲೆಯಲ್ಲಿ ಚುನಾವಣೆ ಸುಗಮವಾಗಿ ನಡೆಸಲು ಕಂಟ್ರೋಲ್ ರೂಂ, ಸಿ-ವಿಸಿಲ್ ಹಾಗೂ 1950 ಸಹಾಯವಾಣಿ ನಿರ್ವಹಣೆ ನೋಡಲ್ ಅಧಿಕಾರಿಗಳ ನೇಮಕ ಮಾಡಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.
ಕಂಟ್ರೋಲ್ ರೂಂ, ಸಿ-ವಿಸಿಲ್ಗೆ ನೋಡಲ್ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ.ಎನ್. ಪ್ರವಿಣ ಹಾಗೂ ಸಹಾಯವಾಣಿ 1950ಕ್ಕೆ ನೋಡಲ್ ಅಧಿಕಾರಿಯಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ತೇಜರಾಜ ಹಸಲಬಾಳ (ಮೊ. 9632465161) ನೇಮಕ ಮಾಡಲಾಗಿದೆ.