ನ್ಯೂಸ್

ಕಮಲಾ ಹ್ಯಾರಿಸ್​ ಪರ ಪಾಪ್​ ತಾರೆ ಟೇಲರ್ ಸ್ವಿಫ್ಟ್ ಬ್ಯಾಟಿಂಗ್​​; ಈ ಕುರಿತು ಡೊನಾಲ್ಡ್​ ಟ್ರಂಪ್​ ಹೇಳಿದಿಷ್ಟು..

ವಾಷಿಂಗ್ಟನ್​ ಡಿಸಿ: ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಪಾಪ್​ ಸೆಲಿಬ್ರಿಟಿ ಟೇಲರ್ ಸ್ವಿಫ್ಟ್ ಬೆಂಬಿಲಿಸಿದ್ದಕ್ಕಾಗಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತರಾಟೆ ತೆಗೆದುಕೊಂಡಿದ್ದಾರೆ. ನಾನು ಟೇಲರ್ ಸ್ವಿಫ್ಟ್ ಅಭಿಮಾನಿಯಾಗಿರಲಿಲ್ಲ. ಅವಳು ತುಂಬಾ ಉದಾರವಾದಿ ವ್ಯಕ್ತಿ. ಯಾವಾಗಲೂ ಡೆಮಾಕ್ರಟಿಕ್​ ಅನ್ನು ಬೆಂಬಲಿಸುತ್ತಾಳೆ. ಬಹುಶಃ ಅವಳು ಇದಕ್ಕೆ ಬೆಲೆ ತೆರುತ್ತಾಳೆ ಎಂದು ಟ್ರಂಪ್​ ಹೇಳಿದ್ದಾರೆ.

ಕಮಲಾ ಹ್ಯಾರಿಸ್​ ಮತ್ತು ತಮ್ಮ ನಡುವಿನ ಮೊದಲ ಅಧ್ಯಕ್ಷೀಯ ಚರ್ಚೆಯ ಬಗ್ಗೆ ಟ್ರಂಪ್ ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದಾಗ ಹ್ಯಾರಿಸ್‌ಗೆ ಟೇಲರ್ ಸ್ವಿಫ್ಟ್ ಬೆಂಬಲ ನೀಡಿದ ಬಗ್ಗೆ ಅವರನ್ನು ಕೇಳಲಾಯಿತು. ನಾನು ಟೇಲರ್ ಸ್ವಿಫ್ಟ್ ಅವರ ಅಭಿಮಾನಿಯಲ್ಲ, ಇದು ಸಮಯದ ವಿಷಯವಾಗಿದೆ. ನೀವು ಬಿಡೆನ್ ಅವರನ್ನು ನೋಡಿ, ನೀವು ಅವನನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಹೇಳಿದ ಅವರು ಸ್ವಿಫ್ಟ್ ಅನ್ನು ಉದಾರವಾದಿ ಎಂದು ಬಣ್ಣಿಸಿದರು. ಸ್ವಿಫ್ಟ್ ಯಾವಾಗಲೂ ಡೆಮಾಕ್ರಟಿಕ್​ ಅನ್ನು ಬೆಂಬಲಿಸುತ್ತಾರೆ ಎಂದು ತೋರುತ್ತದೆ. ಇದಕ್ಕೆ ಬಹುಶಃ ಅವರು ಮಾರುಕಟ್ಟೆಯಲ್ಲಿ ಬೆಲೆ ತೆರುವಳೆಂದು ಹೇಳಿದರು.

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವಿನ ಚರ್ಚೆಯ ಅಂತ್ಯದ ನಂತರ ಟೇಲರ್ ಸ್ವಿಫ್ಟ್ ಹ್ಯಾರಿಸ್ ಅವರನ್ನು ಬೆಂಬಲಿಸಿದರು. ಇನ್​ಸ್ಟಾಗ್ರಾಮ್​ನಲ್ಲಿ 280 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಟೇಲರ್ ಸ್ವಿಫ್ಟ್ ನವೆಂಬರ್ 5 ರಂದು ನಡೆಯುವ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್​ಗೆ ಮತ ಹಾಕುವುದಾಗಿ ಅವರು ಹೇಳಿದ್ದಾರೆ. ಅವರು ಹೇಳಿಕೆಯ ಜತಗೆ ಬೆಕ್ಕನ್ನು ಹೊಂದಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಸ್ವಿಫ್ಟ್ ಫೋಟೋಗೆ ಡೊನಾಲ್ಡ್ ಟ್ರಂಪ್ ಆಯ್ಕೆ ಮಾಡಿದ ಉಪಾಧ್ಯಕ್ಷ ಅಭ್ಯರ್ಥಿ ಜೆಡಿ ವ್ಯಾನ್ಸ್ ಮಕ್ಕಳಿಲ್ಲದ ಬೆಕ್ಕು ಮಹಿಳೆ ಎಂದು ಕಾಮೆಂಟ್​​​ ಮಾಡಿದ್ದಾರೆ. (ಏಜೆನ್ಸೀಸ್​​)