ನ್ಯೂಸ್

ಶೀಟ್​ ಒಡೆದು ಕಳವು

ರೇಷ್ಮೆ ನಗರ ಡೆಸ್ಕ್

162 ಗ್ರಾಂ. ಚಿನ್ನಾಭರಣ, 10 ಲಕ್ಷ ರೂ. ನಗದು ಅಪಹರಣ

ಮಾಗಡಿ: ತಾಲೂಕಿನ ಮಾಡಬಾಳ್​ ಹೋಬಳಿ ನಾಯಕನಪಾಳ್ಯ ಗ್ರಾಮದಲ್ಲಿ ಭಾನುವಾರ ಹಾಡಹಗಲೇ ಮನೆಯ ಶೀಟ್​ ಒಡೆದು ಒಳ ನುಸುಳಿರುವ ಕಳ್ಳರುಚಿನ್ನಾಭರಣ, ಲಾಂತರ ರೂ. ನಗದು ದೋಚಿದ್ದಾರೆ.

ಹಂಚಿಕುಪ್ಪೆ ಗ್ರಾಮಪಂಚಾಯಿತಿ ಸದಸ್ಯ ನರಸಿಂಹ ನಾಯ್ಕ್​ ಎಂಬುವರ ಮನೆಯ ಸಿಮೆಂಟ್​ ಶೀಟ್​ ಒಡೆದು ಕೃತ್ಯ ಎಸಗಲಾಗಿದೆ.

ನರಸಿಂಹನಾಯ್ಕ್​ ಸಾವನದುರ್ಗ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಹೂವು& ಹಣ್ಣಿನ ಅಂಗಡಿ ತೆರೆದಿದ್ದು, ಪ್ರತಿ ನಿತ್ಯದಂತೆ ಮನೆಗೆ ಬೀಗ ಹಾಕಿಕೊಂಡು ಭಾನುವಾರವೂ ಅಂಗಡಿಗೆ ತೆರಳಿದ್ದಾರೆ. ಸಂಜೆ ಮನೆಗೆ ವಾಪಸ್​ ಬಂದ ವೇಳೆ ಕಳ್ಳತನ ಮಾಡಿರುವುದು ಗೊತ್ತಾಗಿದೆ.

ಮಾಗಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.