ನ್ಯೂಸ್

ಶೆಡ್​ ಧ್ವಂಸ: MLA ಕಚೇರಿ ಗಾರ್ಡನ್​​ನಲ್ಲಿಯೇ ಎಮ್ಮೆಗಳನ್ನು ಕಟ್ಟಿದ ದಂಪತಿಗಳು!

ತೆಲಂಗಾಣದ ಭೂಪಾಲಪಲ್ಲಿಯ ಕಾಂಗ್ರೆಸ್ ಶಾಸಕ ಗಂದ್ರ ಸತ್ಯನಾರಾಯಣ ಅವರು ನಮ್ಮ ದನದ ಕೊಟ್ಟಿಗೆಯನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿದ ದಂಪತಿಗಳು, MLA ಅವರ ಕಚೇರಿಯ ಗಾರ್ಡನ್ನ​​ಲ್ಲಿಯೇ ಎಮ್ಮೆಗಳನ್ನು ಕಟ್ಟಿದ ಘಟನೆ ಶುಕ್ರವಾರ ನಡೆದಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಕೂಡ ಭಾರೀ ವೈರಲ್​ ಆಗಿದೆ.

ವೇಶಲ್ಲಪಲ್ಲಿ ಗ್ರಾಮದ ಕೂರಕುಲ ಒಡೆಲು ಮತ್ತು ಲಲಿತಾ ಎಂಬ ರೈತರಾದ ತಮ್ಮ ಎಮ್ಮೆಗಳ ಕೊಟ್ಟಿಗೆಯನ್ನು ಯಾವುದೇ ಮುನ್ಸೂಚನೆ ನೀಡದೆ, ಶಾಸಕರು ಹೇಳಿದ ಕಾರಣ ಸ್ಥಳೀಯ ಅಧಿಕಾರಿಗಳು ಕೆಡವಿದರು ಎಂದು ದಂಪತಿಗಳಿಬ್ಬರು ಆರೋಪಿಸಿದ್ದಾರೆ.

ಇನ್ನು ಈ ಬಗ್ಗೆ ಪೊಲೀಸರನ್ನು ಕೇಳಿದ್ರೆ, ಪೊಲೀಸರು MLA ಆದೇಶದ ಮೇರೆಗೆ ತಾವು ನಡೆದುಕೊಂಡಿದ್ದೇವೆ ಎಂದು ಸ್ವತಃ ಹೇಳಿದ್ದಾರೆ ಎಂದು ರೈತ ಕೂರಕುಲ ಒಡೆಲು ತಿಳಿಸಿದ್ದಾರೆ.

ಎಮ್ಮೆಗಳಿಗೆ ಆಶ್ರಯವಿಲ್ಲದ ಕಾರಣ, MLA ಮೇಲೆ ಕೋಪಗೊಂಡು ಶಾಸಕರ ಕಚೇರಿಯ ಹೊರಗೆ ಎಮ್ಮೆಗಳನ್ನು ಕಟ್ಟಿಹಾಕಿದ್ದಾರೆ.‘ "ನಾವು ಒಂದು ರೂಪಾಯಿಯನ್ನೂ ತೆಗೆದುಕೊಳ್ಳದೆ ಅವರಿಗೆ ಮತ ಹಾಕಿದ್ದೇವೆ. ಇದು ಅವರು ನಮಗೆ ನೀಡುವ ಬಹುಮಾನವೇ?" ಎಂದು ಪ್ರಶ್ನಿಸಿದ ದಂಪತಿ, ಎಮ್ಮೆಗಳಿಗೆ ಹೊಸ ಶೆಡ್ ನಿರ್ಮಿಸುವವರೆಗೆ ನಾವು ಇಲ್ಲಿಂದ ಹಿಂತಿರುಗಿಸುವುದಿಲ್ಲ ಎಂದಿದ್ದಾರೆ.(ಏಜೆನ್ಸೀಸ್​)