ನ್ಯೂಸ್

ಅವಳು ಹುಟ್ಟಿದ್ದು ಕಮಲದಲ್ಲಿ, ಸಿಕ್ಕಿದ್ದು ಭೂಮಿಯಲ್ಲಿ…

ರಾಮಾಯಣದ ಉತ್ತರಕಾಂಡದ ಹದಿನೇಳನೇ ಸರ್ಗದಲ್ಲಿ ಸೀತೆಯ ಜನನದ ಕಥೆ ಬರುವುದು. ಮರುಹುಟ್ಟಿನಲ್ಲಿ ವೇದವತಿಯು ಅಯೋನಿಜೆಯಾಗಿ ಕಮಲದಲ್ಲಿ ಪ್ರಾದುರ್ಭವಿಸಿದಳು. ತಾವರೆಗೆ

ಸಮಾನವಾದ ಕಾಂತಿಯಿಂದ ಬೆಳಗುತ್ತಿದ್ದ ಅವಳು ಪುನ@ ರಾವಣಾಸುರನ ಕೈಗೆ ಸಿಕ್ಕಿದಳು. ರಾವಣನಿಗೇ ಜನಿಸಿದ ಕನ್ಯೆಯೆಂದು ಕೆಲವು ರಾಮಾಯಣದಲ್ಲಿದೆ. ಆಕೆ ಕಮಲದಂತೆ ಮನೋಹರವಾದ ಕಾಂತಿಯಿಂದ ಕೂಡಿದ್ದಳು. ಕಮಲದಲ್ಲಿ ಸಿಕ್ಕಿದ ಆ ಕನ್ಯೆಯನ್ನು ರಾವಣನು ಅರಮನೆಗೆ ಒಯ್ದು ಮಂತ್ರಿಗೆ ತೋರಿಸಿದನು. ಆ ಮಂತ್ರಿಯು ಬಾಲಕ&ಬಾಲಕಿಯರ ಶುಭಾಶುಭ ಲಣಗಳನ್ನು ಚೆನ್ನಾಗಿ ತಿಳಿದವನಾಗಿದ್ದನು! ಕನ್ಯೆಯನ್ನು ಪರೀಸಿ ರಾವಣನಿಗೆ ಹೇಳಿದನು:

ಗೃಹಸ್ಥೆಷಾ ಹಿ ಸುಶ್ರೋಣಿ / ತ್ವದ್ವಧಾಯೇ ದೃಶ್ಯತೇ (ರಾ.ಉ.17&37) ಈ ಸುಂದರ ಕನ್ಯೆಯನ್ನೇನಾದರೂ ನಿನ್ನ ಮನೆಯಲ್ಲಿಯೇ ಉಳಿಸಿಕೊಂಡರೆ ನಿಶ್ಚಯವಾಗಿಯೂ ಇವಳು ನಿನ್ನ ವಧೆಗೆ ಕಾರಣಳಾಗುವುದನ್ನು ಕಾಣುವೆ. ಮಂತ್ರಿಯು ಹೇಳಿದ ಮಾತನ್ನು ಕೇಳಿ ಭಯಗೊಂಡ ರಾವಣನು ಆ ಕನ್ಯೆಯನ್ನು ಒಂದು ಪೆಟ್ಟಿಗೆಯಲ್ಲಿರಿಸಿ ಸಮುದ್ರದಲ್ಲಿ ಹಾಕಿದನು. ಸಮುದ್ರದ ಅಲೆಗಳ ಸೆಳೆತಕ್ಕೆ ಸಿಕ್ಕಿ ದಡ ಸೇರಿದ ಆ ಪೆಟ್ಟಿಗೆ ಮುಂದೆ ಅದು ಹೇಗೋ ಜನಕರಾಜನ ಯಭೂಮಿಯ ಮಧ್ಯದಲ್ಲಿ ಸೇರಿಕೊಂಡಿತು. ಜನಕ ರಾಜನು ಸ್ವತ@ ಭೂಮಿಯನ್ನು ಉ:ಉಮೆ ಮಾಡುತ್ತಿದ್ದ. ಆ ಸಂದರ್ಭದಲ್ಲಿ ನೇಗಿಲಿನ ಗುಳಕ್ಕೆ ಸಿಕ್ಕಿ ಸಾಲುಗಳ ಮಧ್ಯೆ ಗೆರೆಯ ಮೂಲಕ ಪೆಟ್ಟಿಗೆಯೊಂದು ಹೊರಬಂದಿತು. "ಸೀತೆ' ಎಂದರೆ ನೇಗಿಲಿನಿಂದ ಉತ್ತಭೂಮಿಯಲ್ಲಿ ಉಂಟಾಗುವ ನೇಗಿಲಿನ ಗೀರು.

"ಸೀತಾ ಲಾಂಗುಲ ಪದ್ಧತಿ@' & ಅಮರ. ಇದನ್ನು ಕಂಡ ಆಶ್ಚರ್ಯಚಕಿತನಾದ ಜನಕ ಮಹಾರಾಜ ಆ ಪೆಟ್ಟಿಗೆಯ ಮುಚ್ಚಳವನ್ನು ತೆಗೆಸಿದ. ಅದರೊಳಗಿದ್ದಳು ಮನೋಹರ ಕಾಂತಿಯುಳ್ಳ ಆ ಹೆಣ್ಣುಮಗು. ನೇಗಿಲಿನ ಗೀರಿನಲ್ಲಿ ಸಿಕ್ಕ ಕಾರಣ ಆಕೆಗೆ ಸೀತಾ ಎಂದೇ ನಾಮಕರಣವನ್ನು ಕೂಡ ಮಹಾರಾಜನು ಮಾಡಿದನು. ಆ ಹೆಣ್ಣು ಶಿಶುವನ್ನು ತನ್ನ ಔರಸ ಪುತ್ರಿಯನ್ನು ನೋಡುವಂತೆ ನೋಡಿಕೊಂಡನು. ಅವಳೇ ಸಾಧ್ವೀ ವೇದಾವತಿಯು! ತ್ರೇತಾಯುಗವು ಪ್ರಾರಂಭವಾದ ನಂತರ ಇವಳು ರಾವಣನ ಸಂಹಾರಕ್ಕಾಗಿ ಮಿಥಿಲೇಶ್ವರನಾದ ಮಹಾತ್ಮ ನಾದ ಜನಕಮಹಾರಾಜನ ಕುಲಕ್ಕೆ ಸೇರಿದಳು. ಮಹಾವಿಷ್ಣುವನ್ನು ಮದುವೆ ಯಾಗಬೇಕೆಂದು ತಪಸ್ಸನ್ನು ಮಾಡಿದ ವೇದವತಿಯು ಶ್ರೀರಾಮನನ್ನೇ ಮದುವೆಯಾದ ಕಾರಣ ಶ್ರೀರಾಮನು ಮಹಾವಿಷ್ಣು ಎಂಬುದರಲ್ಲಿ ಸಂಶಯವೇ ಇಲ್ಲ.

"ವಿಷ್ಣಸ್ತ$್ವಂ ಹಿ ಸನಾತನ@' (17&40 ) ಆ ವೇಲೆಯಲ್ಲಿ ಹಿಂದೆ ನಡೆದುದನ್ನು ಋಷಿಗಳು ವಿವರಿಸಿದರು. ಇಲ್ಲಿ ವೈಾನಿಕವಾಗಿ ಎರಡು ಮಹತ್ವಗಳನ್ನು ಗಮನಿಸಬೇಕು.
ಒಂದು: ಭೂಮಿಯನ್ನು ಸಮುದ್ರವು ಅತಿಕ್ರಮಿಸುವುದು ಮೊದಲಿನಿಂದಲೂ ಸತ್ಯವಾಗಿತ್ತು ಎಂಬುದು.
ಎರಡು: ತಪಸ್ವಿನಿಯರು ಆಡಿದ ಮಾತು ಎಂದೆಂದಿಗೂ ಸುಳ್ಳಾಗುತ್ತಿರಲಿಲ್ಲ! ಭೂಮಿಯ ಒಡಲಿನಿಂದ ಜನಿಸಿರುವ ಕಾರಣ ಸೀತೆಗೆ ಭೂಮಿಜೆ ಎಂದು ಕರೆಯುತ್ತಿದ್ದರು. ಲಂಕೆಯ ತುದಿಯಲ್ಲಿ ರಾವಣನು ಶಿಶುವನ್ನು ಪೆಟ್ಟಿಗೆಯಲ್ಲಿ ಹಾಕಿ ಸಮುದ್ರಕ್ಕೆ ಎಸೆದನು. ಅದು ಭೂಮಿಯನ್ನು ಸೇರಬೇಕೆಂದರೆ ಸಮುದ್ರದ ಅತಿಕ್ರಮಣ ಆಗಿರಲೇಬೇಕು. ಸಿಯರು ಒಂದು ರ್ನಿಣಯವನ್ನು ತೆಗೆದುಕೊಂಡರೆ ಅದು ಸಾರ್ವಕಾಲಿಕ ಸತ್ಯವಾಗಿ ನಿಲ್ಲವುದು! ತಪಸ್ಸಿನ ಹಿರಿಮೆ ಇದ್ದರಂತೂ ಅವರ ಬಯಕೆ ಈಡೇರಲೇ ಬೇಕು. ದಾಂಪತ್ಯದ ಮೆಟ್ಟಿಲನ್ನು ಏರಿದ ನಂತರ ಅವರು ಗಂಡನ ತಪ್ಪನ್ನು ಗ್ರಹಿಸುವುದೂ ಇಲ್ಲ! ಗಂಡನ ವಾಕ್ಯವೇ ಗುರುವಾಕ್ಯವಾಗಿ ಪರಿಗಣಿಸಲ್ಪಡುವುದು! ಸಿಕುಲಕ್ಕೇ ಆದರ್ಶಮಯಿ ಸೀತೆ. ಪತಿಯೊಂದಿಗೆ ಇದ್ದರೂ ಸುಖ& ಸಂತೋಷವನ್ನು ಹೊಂದಲಿಲ್ಲ! ಬೆಂಕಿಗೆ ಬಿದ್ದಳು. ಪತಿಯೇ ಹೊರಹಾಕಿದನು. ಸೀತೆ ಪಟ್ಟಷ್ಟು ಕಷ್ಟವನ್ನು ನಾರಿಕುಲದಲ್ಲಿ ಯಾರೂ ಪಟ್ಟಿರಲಿಕ್ಕಿಲ್ಲ!ಳೇ ಕರೆತಂದರೂ, ತುಂಬಿದ ಸಭೆಯಲ್ಲಿ ಶ್ರೀರಾಮ ಪುನ@ ಸೀತೆಯ ಪರಿಶುದ್ಧತೆಯನ್ನು ಸಿದ್ಧಪಡಿಸಲು ಹೇಳಿದಾಗ ಭೂಮಿಜೆ ಭೂಮಿಯಲ್ಲಿಯೇ ಐಕ್ಯವಾದಳು!

(ಲೇಖಕರು ಕನ್ನಡ ಹಾಗೂ ಸಂಸತ ವಿದ್ವಾಂಸರು; ಯಕ್ಷಗಾನ ಅರ್ಥಧಾರಿ)
(ಪ್ರತಿಕ್ರಿಯಿಸಿ: vvsudina@gmail.com, anantvaidyayellapur@gmail.com)