ನ್ಯೂಸ್

'ಅವಳು ಸಾಯಲು ಬಯಸಿದ್ದಳು, ಅದಕ್ಕಾಗಿ ನಾನೇ ಕೊಂದೆ': ಮಾಜಿ ಪ್ರಿಯತಮೆಗೆ ವಿಷ ಕೊಟ್ಟು ಸಾಯಿಸಿದ ಪ್ರಿಯತಮ! Lover

Lover: ಉತ್ತರ ಪ್ರದೇಶದ ಲಲಿತಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಮಾಜಿ ಲಿವ್ ಇನ್ ರಿಲೇಷನ್​​ ಸಂಗಾತಿಗೆ ವಿಷ ಹಾಕಿ ಕೊಂದಿರುವ ಕೊಂದಿದ್ದಾನೆ. ಆದರೆ ಆತ ಹೇಳಿದ ಕಾರಣ ಕೇಳಿ ಪೊಲೀಸರೇ ಶಾಕ್‌ ಆಗಿದ್ದಾರೆ.

ತನ್ನ ಮಾಜಿ ಪ್ರೇಯಸಿಗೆ ವಿಷ ಉಣಿಸಿ ಕೊಲೆ ಮಾಡಿದ ನಂತರ ಯುವಕ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಮೃತ ಯುವತಿ ರಾಣಿಯ ದೇಹವು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು, ಪೊಲೀಸರಿಗೆ ಅವಳನ್ನು ಗುರುತಿಸುವುದು ಕಷ್ಟಕರವಾಗಿತ್ತು. ಆದರೆ ಆ ಯುವತಿಯ ಕೈಯಲ್ಲಿ ‘ಆರ್-ಜಗದೀಶ್’ ಎಂದು ಹಚ್ಚೆ ಇದ್ದ ಕಾರಣ ಮಹಿಳೆಯನ್ನು ಗುರುತಿಸಲು ಸಹಾಯವಾಯಿತು.

ಆರೋಪಿ ಜಗದೀಶ್ ರಾಯ್ಕ್ವಾರ್ ತನ್ನ ಪ್ರಿಯತಮೆಯನ್ನು ಹೇಗೆ ಕೊಲ್ಲುವುದು ಮತ್ತು ಆಕೆಗೆ ವಿಷ ಕುಡಿಸಿ ದೇಹವನ್ನು ನದಿಗೆ ಎಸೆಯುವುದು ಎಂದು ಗೂಗಲ್‌ನಲ್ಲಿ ಹುಡುಕಿದ್ದ.

ಆರೋಪಿ ತಪ್ಪಿಸಿಕೊಳ್ಳಲು ಯೋಜಿಸುತ್ತಿದ್ದಾಗ ಪೊಲೀಸರು ಅವನನ್ನು ಬಂಧಿಸಿದರು. ಆ ವ್ಯಕ್ತಿ 'ಅವಳು ಸಾಯಲು ಬಯಸಿದ್ದಳು, ಅದಕ್ಕಾಗಿಯೇ ಅವನು ಅವಳನ್ನು ಕೊಲೆ ಮಾಡಿದೆ' ಎಂದು ಯಾವುದೇ ಪಶ್ಚಾತ್ತಾಪವಿಲ್ಲದೆ ಪೊಲೀಸರ ಮುಂದೆ ಹೇಳಿದ್ದಾನೆ.

ಸಂತ್ರಸ್ತೆ ರಾಣಿ, ಜಗದೀಶ್ ಜೊತೆ ಸಂಬಂಧ ಹೊಂದಿದ್ದಳು, ದಂಪತಿಗಳು ಲಲಿತಪುರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮಹಿಳೆ ತನ್ನ ಪತಿ ನರೇಂದ್ರನನ್ನು ಬಿಟ್ಟು ಜಗದೀಶ್ ಜೊತೆ ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಮದುವೆ ಬೇರೊಬ್ಬನ ಜೊತೆ ನಿಶ್ಚಯವಾಗಿತ್ತು, ಆದರೆ ರಾಣಿ ಮತ್ತು ಅವನ ಭಾವಿ ಪತ್ನಿ ಒಟ್ಟಿಗೆ ವಾಸಿಸಬೇಕೆಂದು ಅವನು ಬಯಸಿದ್ದನು. ಮಹಿಳೆ ಈ ಬೇಡಿಕೆಗೆ ಒಪ್ಪಲು ನಿರಾಕರಿಸಿ ಅವನನ್ನು ತೊರೆದಳು. ಇದರಿಂದ ಕೋಪಗೊಂಡ ಜಗದೀಶ್ ತನ್ನ ಪ್ರಿಯತಮೆಯಾಗಿದ್ದ ರಾಣಿಯನ್ನು ಕೊಲ್ಲುವ ಮಾರ್ಗಗಳನ್ನು ಆನ್‌ಲೈನ್‌ನಲ್ಲಿ ಹುಡುಕಿ, ಆಕೆಗೆ ವಿಷ ಕೊಟ್ಟು ಕೊಲೆ ಮಾಡಿದ್ದಾನೆ.

ಜಗದೀಶ್ ರಾಣಿಗೆ ಜ್ಯೂಸ್​ನಲ್ಲಿ ವಿಷ ಬೆರೆಸಿ ಕುಡಿಸಿದನು. ಪ್ರಜ್ಞೆ ತಪ್ಪಿದ ನಂತರ ಅವಳ ಕತ್ತು ಹಿಸುಕಿ ಕೊಂದಿದ್ದಾನೆ. ನಂತರ, ಆಕೆಯ ದೇಹವನ್ನು ಶಹಜಾದ್ ನದಿಯಲ್ಲಿ ನೀಲಿ ಚೀಲದಲ್ಲಿ ಕಟ್ಟಿ ಎಸೆದನು. ಸ್ಥಳೀಯ ಮೀನುಗಾರನೊಬ್ಬ ನದಿಯಲ್ಲಿ ತೇಲುತ್ತಿರುವ ನೀಲಿ ಚೀಲವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದನು. ಆಕೆಯ ಕೈ ಮೇಲಿದ್ದ ಜಗದೀಶನ ಹೆಸರಿನಿಂದ ಶವವನ್ನು ಪತ್ತೆಹಚ್ಚಲು ಸಹಾಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)