ನ್ಯೂಸ್

ಪುತ್ರನ ಕ್ಯಾನ್ಸರ್ ಚಿಕಿತ್ಸೆಗೆಂದು ಹಣ ಕೇಳಲು ಬಂದವಳು ಬರೋಬ್ಬರಿ 82 ಲಕ್ಷ ರೂ. ಸುಲಿಗೆ ಮಾಡಿದಳು..!

ಬೆಂಗಳೂರು: ಪುತ್ರನ ಕ್ಯಾನ್ಸರ್ ಚಿಕಿತ್ಸೆಗೆ ಸಹಾಯ ಪಡೆದ ಮಹಿಳೆ, ಸಲುಗೆಯಿಂದ ವರ್ತಿಸಿ ಖಾಸಗಿ ವಿಡಿಯೋ ಇಟ್ಟುಕೊಂಡು ವ್ಯಕ್ತಿಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿ 82 ಲಕ್ಷ ರೂ. ಸುಲಿಗೆ ಮಾಡಿರುವ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

60 ವರ್ಷದ, ಈ ಕುರಿತು ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ 40 ವರ್ಷದ ಮಹಿಳೆ ಮತ್ತು ಆಕೆಯ ಸಹೋದರಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿತ ಮಹಿಳೆ ಪುತ್ರನಿಗೆ ಕ್ಯಾನ್ಸರ್ ಇರುವ ವಿಚಾರ ತಿಳಿದ ದೂರುದಾರ, ಆಕೆಗೆ ಕರೆ ಮಾಡಿ ಹೋಟೆಲ್ ಬಳಿಗೆ ಕರೆಸಿಕೊಂಡಿದ್ದರು. ಅಲ್ಲಿಗೆ ಬಂದ ಮಹಿಳೆ, 5 ಸಾವಿರ ರೂ. ಕೊಟ್ಟು ಕಳುಹಿಸಿದ್ದರು. ಆನಂತರ ಪದೇ ಪದೆ ಕರೆ ಮಾಡಿ ಆನ್‌ಲೈನ್‌ನಲ್ಲಿ ಮಹಿಳೆ, ಹಣ ಪಡೆಯುತ್ತಿದ್ದಳು. ಮೇ ನಲ್ಲಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇರುವ ಹೋಟೆಲ್‌ಗೆ ಮಹಿಳೆ, ದೂರುದಾರರನ್ನು ಕರೆಸಿಕೊಂಡಿದ್ದಳು.

ಇಬ್ಬರು ಸಲುಗೆಯಿಂದ ಇದ್ದ ದೃಶ್ಯಾವಳಿಗಳನ್ನು ಸೆರೆ ಹಿಡಿದುಕೊಂಡ ಮಹಿಳೆ, ಆನಂತರ ಬ್ಲ್ಯಾಕ್‌ಮೇಲ್‌ಗೆ ಶುರು ಮಾಡಿದ್ದಳು. ಆದರೂ ಮತ್ತೆರೆಡು ಬಾರಿ ಹೋಟೆಲ್‌ನಲ್ಲಿ ಇಬ್ಬರು ಖಾಸಗಿ ಕ್ಷಣಗಳನ್ನು ಕಳೆದಿದ್ದರು. ಈ ಎಲ್ಲ ವಿಡಿಯೋವನ್ನು ಮಹಿಳೆ, ತನ್ನ ಸಹೋದರಿಗೂಹಂಚಿಕೊಂಡು ಆಕೆಯ ಕಡೆಯಿಂದಲೂ ಬ್ಲ್ಯಾಕ್‌ಮೇಲ್ ಮಾಡಿಸಿ ಹಣ ಸುಲಿಗೆ ಮಾಡಿಸಿದ್ದಳು.

ದೂರುದಾರರ ಮೊಬೈಲ್ ವಾಟ್ಸ್‌ಆ್ಯಪ್‌ಗೆ ವಿಡಿಯೋ ಕಳುಹಿಸಿ 75 ಲಕ್ಷ ರೂ.ಗೆ ಬೇಡಿಕೆ ಒಡ್ಡಿದ್ದಾರೆ. ಕೊಡದಿದ್ದರೇ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 82 ಲಕ್ಷ ರೂ. ಜಮೆ ಮಾಡಿಸಿಕೊಂಡಿದ್ದಾರೆ. ಇಷ್ಟಾದರೂ ಮತ್ತೆ 42 ಲಕ್ಷ ರೂ. ಕೊಡುವಂತೆ ಡಿಮ್ಯಾಂಡ್ ಮಾಡಿದ್ದರು.

ಅಷ್ಟೊಂದು ಹಣ ಇಲ್ಲದೆ ಇದ್ದ ಕಾರಣ ನೊಂದ ದೂರುದಾರ, ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಇಬ್ಬರು ಮಹಿಳೆಯರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬ್ಯಾಂಕ್ ಖಾತೆಗೆ ಹಣ ಜಮೆ ಆಗಿರುವ ಮಾಹಿತಿ ಮತ್ತು ಮೊಬೈಲ್ ಕರೆಗಳ ವಿವರ ಪಡೆದು ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.