ನ್ಯೂಸ್

ಶತ್ರುಘ್ನ ಸಿನ್ಹಾಗೆ ಶಸ್ತ್ರಚಿಕಿತ್ಸೆ..ಆರೋಗ್ಯ ಸ್ಥಿರ

ಮುಂಬೈ: ಬಾಲಿವುಡ್ ಹಿರಿಯ ನಟ ಮತ್ತು ರಾಜಕಾರಣಿ ಶತ್ರುಘ್ನ ಸಿನ್ಹಾ ನಗರದ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಸಿನ್ಹಾ ಅವರು ಇತ್ತೀಚೆಗೆ ಚುನಾವಣಾ ಪ್ರಚಾರ ಮತ್ತು ಅವರ ಪುತ್ರಿ ಸೋನಾಕ್ಷಿ ಸಿನ್ಹಾ ಅವರ ವಿವಾಹದ ಕಾರಣದಿಂದ ತೀವ್ರವಾಗಿ ಬಳಲಿದ್ದರು ಎನ್ನಲಾಗುತ್ತಿದೆ.

ಈ ಹಿಂದೆ ಸೋನಾಕ್ಷಿ ತನ್ನ ಪತಿ ಜಹೀರ್ ಇಕ್ಬಾಲ್ ಅವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದಾಗ, ಆಕೆ ಗರ್ಭವತಿಯಾಗಿರಬಹುದು ಎಂದು ಊಹಾಪೋಹಗಳು ಹುಟ್ಟಿಕೊಂಡಿದ್ದವು.

ಆದರೆ, ನಟಿ ತನ್ನ ತಂದೆಯನ್ನು ನೋಡಲು ಆಸ್ಪತ್ರೆಗೆ ಹೋಗಿದ್ದರು ಎಂದು ಮೂಲಗಳು ಖಚಿತಪಡಿಸಿವೆ. ಶತ್ರುಘ್ನ ಎಷ್ಟು ಬೇಗ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಾರೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲದಿದ್ದರೂ, ಅವರ ಆರೋಗ್ಯ ಪ್ರಸ್ತುತ ಸ್ಥಿರವಾಗಿದೆ. ಹಾಗೆಯೇ ಅವರು ವೀಕ್ಷಣೆಯಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.

ಶತ್ರುಘ್ನ ಅವರ ಲೋಕಸಭೆ ಗೆಲುವು ಮತ್ತು ಸೋನಾಕ್ಷಿಯ ವಿವಾಹದ ಡಬಲ್ ಸಂಭ್ರಮಾಚರಣೆಯ ನಂತರ ಸಿನ್ಹಾ ಕುಟುಂಬಕ್ಕೆ ಇದು ಸ್ವಲ್ಪಮಟ್ಟಿಗೆ ನಿರಾಸೆಯಾಗಿದೆ. ಶತ್ರುಘ್ನ ಅವರು ಇತ್ತೀಚೆಗೆ ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದಿಂದ ಗೆದ್ದಿದ್ದಾರೆ.