ಹುಣಸೂರು: ಮೈಸೂರಿನಲ್ಲಿ ಪಿಯು ಶಿಕ್ಷಣ ಇಲಾಖೆ ಆಯೋಜಿಸಿದ್ದ ಪದವಿಪೂರ್ವ ಕಾಲೇಜು ಮಟ್ಟದ ಅಥ್ಲೆಟಿಕ್ ಪಂದ್ಯಾವಳಿಯಲ್ಲಿ ತಾಲೂಕಿನ ಶಾಸ್ತ್ರಿ ಪಿಯು ಕಾಂಪೋಸಿಟ್ ಕಾಲೇಜು ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿತು. ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗಗಳಲ್ಲಿ ತಮ್ಮ ಪ್ರತಿಭೆ, ಶ್ರಮದ ಮೂಲಕ ಪ್ರಾಬಲ್ಯ ಸಾಧಿಸಿದರು.
ಬಾಲಕರ ವಿಭಾಗ: 100 ಮೀ. ಓಟದ ಸ್ಪರ್ಧೆಯಲ್ಲಿ ಜಸ್ವಂತ್ ಪ್ರಥಮ, 200 ಮೀ. ಓಟದಲ್ಲಿ ಬಸಂತ್ ಪ್ರಥಮ, ಕ್ರೀಡಾಪಟು ಅಭಿಷೇಕ್ 800 ಮೀ. ಓಟದಲ್ಲಿ ಪ್ರಥಮ ಮತ್ತು 1500 ಮೀ. ಓಟದಲ್ಲಿ ದ್ವೀತೀಯ ಸ್ಥಾನ ಸಂಪಾದಿಸಿದ್ದಾರೆ. ಟ್ರಿಪಲ್ ಜಂಪ್‌ಮತ್ತು ಲಾಂಗ್ ಜಂಪ್‌ನಲ್ಲಿ ರಾಘವೇಂದ್ರ ಪ್ರಥಮ ಸ್ಥಾನ, 400 ಮೀ. ಹರ‌್ಡಲ್ಸ್‌ನಲ್ಲಿ ಗೌತಮ್ ತೃತೀಯ ಸ್ಥಾನ, 4*100 ಮೀ. ರಿಲೇಯಲ್ಲಿ ಬಸಂತ್ ನೇತೃತ್ವದ ತಂಡ(ಜಸ್ವಂತ್, ಮೇಘಶ್ಯಾಮ್, ರಾಘವೇಂದ್ರ) ಪ್ರಥಮ ಸ್ಥಾನ, 4*400 ಮೀ ರಿಲೇನಲ್ಲಿ ಅಭಿಷೇಕ್ ನೇತೃತ್ವದ ತಂಡ (ಗೌತಮ್, ಚಿನ್ಮಯ್, ರಾಘವೇಂದ್ರ) ಪ್ರಥಮ ಸ್ಥಾನ ಗಳಿಸಿದ್ದಾರೆ.
ಬಾಲಕಿಯರ ವಿಭಾಗ: ಬಾಲಕಿಯರ ವಿಭಾಗದಲ್ಲಿ 100 ಮೀ. ಓಟದಲ್ಲಿ ಅನುಶ್ರೀ ತೃತೀಯ ಸ್ಥಾನ, ಟ್ರಿಪಲ್ ಜಂಪ್‌ನಲ್ಲಿ ಭುವನೇಶ್ವರಿ ಪ್ರಥಮ, ಲಾಂಗ್ ಜಂಪ್‌ನಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.
ಕ್ರೀಡಾಪಟುಗಳ ಸಾಧನೆಯನ್ನು ಕಾಲೇಜಿನ ಕಾರ್ಯದರ್ಶಿ ಎಸ್.ರಾಧಾಕೃಷ್ಣ, ಪ್ರಾಂಶುಪಾಲ ರವಿಶಂಕರ್, ದೈಹಿಕ ತರಬೇತುದಾರ ಕಾರ್ತೀಕ್ ಮತ್ತು ಶಿಕ್ಷಕ ವೃಂದ ಅಭಿನಂದಿಸಿದೆ.