ನ್ಯೂಸ್

ಶಾರುಖ್​ ಖಾನ್ ನಿಜವಾಗಿಯೂ IPL ಪಿಲ್ಲರ್​! ಹೀಗ್ಯಾಕಂದ್ರು BCCI ಮಾಜಿ ಅಧ್ಯಕ್ಷ ಲಲಿತ್​ ಮೋದಿ?

ಮುಂಬೈ: ಬಾಲಿವುಡ್​​ ನಟ ಶಾರುಖ್​​ ಖಾನ್​ ಅವರನ್ನು, IPL ನ ಕೆಕೆಆರ್​ ತಂಡವನ್ನು ಖರೀದಿಸಲು ಹೇಗೆ ಮನವೊಲಿಸಿದರು ಎಂಬುದರ ಬಗ್ಗೆ ಮಾತನಾಡಿರುವ ಐಪಿಎಲ್​ನ ಸಂಸ್ಥಾಪಕ ಹಾಗೂ ಬಿಸಿಸಿಐನ ಮಾಜಿ ಅಧ್ಯಕ್ಷ ಲಲಿತ್​ ಮೋದಿ, ಶಾರುಖ್ ಖಾನ್​​ ​ ಐಪಿಎಲ್​ನ ''ಪಿಲ್ಲರ್'' ಎಂದು ಕರೆದಿದ್ದಾರೆ.

ಈ ಕುರಿತು ಖಾಸಗಿ ಸಂದರ್ಶನದಲ್ಲಿ ಮಾತನಾಡಿರುವ ಲಲಿತ್​, '' ಕ್ರೀಡಾಂಗಣಕ್ಕೆ ಆಟ ನೋಡಲು ಅಭಿಮಾನಿಗಳನ್ನು, ಜನರನ್ನು ಮತ್ತು ವಿಶೇಷವಾಗಿ ಮಕ್ಕಳು, ಮಹಿಳೆಯರನ್ನು ಹೇಗೆ ಕರೆ ತರುವುದು ಎಂಬ ಯೋಚನೆಯಲ್ಲಿದ್ದೆ. ಯಾವುದಾದರೂ ಒಂದು ಐಪಿಎಲ್​ ತಂಡವನ್ನು ಸೆಲೆಬ್ರಿಟಿಸ್​ ಖರೀದಿಸಿದರೆ ಉತ್ತಮ ಎಂದು ಅನಿಸಿತ್ತು. ಹೀಗಾಗಿ, ಶಾರುಖ್​​ ಅವರನ್ನು ಸಂಪರ್ಕ ಮಾಡಲಾಯಿತು. ಐಪಿಎಲ್​ ಬಗ್ಗೆ ಅದರಲ್ಲೂ ಶಾರುಖ್ ಗೆ ಏನೂ ತಿಳಿಯದು. ಆಗಿದ್ದರೂ ಅವರ ಕೂಡ ಬಿಡ್​ ಮಾಡಿಸಿದೆವು'' ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ನನಗೆ ಶಾರುಖ್​ ಖಾನ್​ ಬಗ್ಗೆ ತಿಳಿದಿತ್ತು. ಆದರೆ, ಬಾಲಿವುಡ್​ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ. ಅದು ಅಭಿಮಾನಿಗಳು ಮತ್ತು ಶಾರುಕ್​ಗೆ ಮಾತ್ರ ಗೊತ್ತು.​ ಇದೆಲ್ಲರದ ನಡುವೆ ಶಾರುಖ್​​ ಐಪಿಎಲ್​ ಬಿಡ್ಡಿಂಗ್​ ಮಾಡಿದರು. ಮುಂಬೈ ಮತ್ತು ಅಹಮದಾಬಾದ್​ ಮೇಲೆ ಶಾರುಖ್​​ಗೆ ಆಕರ್ಷಣೆಯಾಗಿತ್ತು. ಆದರೆ, ಅ ಪರಿಸ್ಥಿತಿಯಲ್ಲಿ ಕೋಲ್ಕತ್ತಾ ತಂಡವನ್ನು ಖರೀದಿಸಿದರು. ಇನ್ನೂ ತಂಡವನ್ನು ಖರೀದಿ ಮಾಡಿದ ಬಳಿಕ ಎಲ್ಲೆಂದರಲ್ಲಿ ಪ್ರಚಾರಕ್ಕೆ ಹಾಜರಿರಬೇಕು ಎಂದು ಶಾರುಖ್​ಗೆ ಹೇಳಿದ್ದೆ. ಇದಕ್ಕೆ ಅವರು, ನನಗೆ ಸಿನಿಮಾ ಡೇಟ್ಸ್​ಗಳು ಇವೆ ಎಂದಿದ್ದರು. ನಾವು ಹೇಗೋ ಮಾಡಿ ಅವರ ಮನವೊಲಿಸಿದೆ. ಇಂದು ಅವರು (ಶಾರುಖ್​) ಐಪಿಎಲ್​ನ ಆಧಾರಸ್ತಂಭ ಎಂದು ನನಗನಿಸುತ್ತಿದೆ ಎಂದು ಹೇಳಿದ್ದಾರೆ.

ಐಪಿಎಲ್​ ಬಿಡ್​ ಮಾಡುವ ಸಂದರ್ಭದಲ್ಲಿ ಶಾರುಖ್​ ತುಂಬಾ ಪ್ರಮುಖ ಪಾತ್ರವಹಿಸಿದ್ದರು. ಶಾರುಖ್​ ಬಿಡ್​ ಮಾಡಿದ್ದರಿಂದ ಮಕ್ಕಳು ಮತ್ತು ಮಹಿಳೆಯರನ್ನು ಕ್ರೀಡಾಂಗಣಕ್ಕೆ ಕರೆ ತರಲು ಸಾಧ್ಯವಾಯಿತು ಎಂದು ಲಲಿತ್​ ಕೊಂಡಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ,(ಏಜೆನ್ಸೀಸ್​).