ಮುಂಬೈ: ಬಾಲಿವುಡ್ನ ಬಾದ್ಷಾ, ಶಾರುಖ್ ಖಾನ್ ಮತ್ತು ಅವರ ಪುತ್ರಿ ಸುಹಾನಾ ಖಾನ್ ಇದೀಗ ಒಂದೇ ಸಿನಿಮಾದಲ್ಲಿ ಅಭಿನಯಿಸುವ ಮುಖೇನ ಪ್ರಥಮ ಬಾರಿಗೆ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಸದ್ಯ ಈ ಸಂಗತಿ ತಿಳಿದ ಶಾರೂಖ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರಕ್ಕೆ 'ದಿ ಕಿಂಗ್' ಎಂಬ ತಾತ್ಕಾಲಿಕ ಶೀರ್ಷಕೆಯನ್ನು ಘೋಷಿಸಲಾಗಿದೆ.
ಇದನ್ನೂ ಓದಿ: ಜವಾನ್ ದಾಖಲೆ ಮುರಿಯುವುದೇ ‘ಟೈಗರ್ 3’?- ಭಾನುವಾರ ತೆರೆಗೆ ಅಪ್ಪಳಿಸಲಿದೆ ಸಲ್ಮಾನ್ – ಕತ್ರಿನಾ ಅಭಿನಯದ ‘ಟೈಗರ್ 3’
ಬಹುನಿರೀಕ್ಷಿತ ಬೆಳವಣಿಗೆಯಲ್ಲಿ ತಂದೆ-ಮಗಳ ಜೋಡಿಯು 'ದಿ ಕಿಂಗ್' ಸಿನಿಮಾದಲ್ಲಿ ಒಟ್ಟಿಗೆ ನಟಿಸುವ ಮೂಲಕ ಸಿನಿಪ್ರಿಯರನ್ನು ಮನರಂಜಿಸಲು ಸಜ್ಜಾಗಿದ್ದಾರೆ. ಈ ಚಿತ್ರವನ್ನು ಪ್ರತಿಭಾವಂತ ನಿರ್ದೇಶಕ ಸುಜೋಯ್ ಘೋಷ್ ನಿರ್ದೇಶಿಸಲಿದ್ದು, ಸಿದ್ಧಾರ್ಥ್ ಆನಂದ್ ನಿರ್ಮಿಸಲಿದ್ದಾರೆ. ಶಾರೂಖ್ ಮತ್ತು ಅವರ ಪುತ್ರಿ ಸುಹಾನಾ ಕಾಂಬಿನೇಷನ್ ಬೆಳ್ಳಿ ಪರದೆಯ ಮೇಲೆ ಹೇಗೆ ಮೂಡಿಬರಲಿದೆ ಎಂಬ ಕಾತರ ಸದ್ಯ ಅಭಿಮಾನಿಗಳಲ್ಲಿ ಮೂಡಿದೆ.
'ದಿ ಆರ್ಚೀಸ್' ಸಿನಿಮಾದಲ್ಲಿ ನಟಿಸಿರುವ ಸುಹಾನಾ, ಈ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಟ್ರೇಲರ್ ಬಿಡುಗಡೆಗೊಂಡು, ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು. ಮಗಳ ಹೆಜ್ಜೆಯನ್ನು ಕೊಂಡಾಡಿದ ಶಾರೂಖ್, ಸಿನಿಮಾ ಕುರಿತು ಟ್ವೀಟ್ ಕೂಡ ಮಾಡಿ, ಚಿತ್ರತಂಡಕ್ಕೆ ಶುಭಕೋರಿದ್ದರು,(ಏಜೆನ್ಸೀಸ್).