ನ್ಯೂಸ್

'ಜವಾನ್'​ ಚಿತ್ರದಲ್ಲಿ ಸಮಾಜಕ್ಕೆ ಏನಾದರೂ ಸಂದೇಶವಿದ್ಯಾ?; ಅಭಿಮಾನಿ ಪ್ರಶ್ನೆಗೆ ಶಾರೂಖ್​ ಕೊಟ್ಟ ಉತ್ತರವೇನು?

ಮುಂಬೈ: ಬಾಲಿವುಡ್​​ನ ಕಿಂಗ್​ ಖಾನ್​, ನಟ ಶಾರೂಖ್​ ಖಾನ್​ ಅಭಿನಯದ ಬಹುನಿರೀಕ್ಷಿತ ಚಿತ್ರ 'ಜವಾನ್'​ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ಆರಂಭಗೊಂಡಿವೆ. ಚಿತ್ರ ಬಿಡುಗಡೆಗೂ ಮುನ್ನವೇ ಹಲವು ಪ್ರಶ್ನೆಗಳು ಉದ್ಬವಗೊಂಡಿದ್ದು, ಫ್ಯಾನ್ಸ್​ ಟ್ವಿಟರ್​ನಲ್ಲಿ ನಟ ಶಾರೂಖ್​ ಅವರನ್ನು ಟ್ಯಾಗ್​ ಮಾಡಿ ಪ್ರಶ್ನಿಸುತ್ತಿದ್ದಾರೆ.

ಅಟ್ಲಿ ಕುಮಾರ್​ ನಿರ್ದೇಶನದ ಜವಾನ್​ ಚಿತ್ರದ ಬಗ್ಗೆ ಅಭಿಮಾನಿಯೊಬ್ಬ, ಈ ಸಿನಿಮಾದಲ್ಲಿ ಯಾವುದಾದರೂ ಸಂದೇಶವಿದೆಯಾ? ಏನು ಹೇಳಲು ಹೊರಟಿದೆ ಚಿತ್ರ? ಎಂಬ ಪ್ರಶ್ನೆಯನ್ನು ಶಾರೂಖ್​ಗೆ ಟ್ವೀಟ್​ ಮುಖೇನ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಎಸ್​ಆರ್​ಕೆ, "ಚಿತ್ರವು ಮಹಿಳಾ ಸಬಲೀಕರಣದ ಬಗ್ಗೆ ಬಲವಾದ ಅಭಿಪ್ರಾಯವನ್ನು ಹೊಂದಿದೆ. ಅವರನ್ನು ಗೌರವಿಸುವುದು ಹೇಗೆ ಎಂಬುದರ ಬಗ್ಗೆ ಒಳಗೊಂಡಿದೆ" ಎಂದು ಹೇಳಿದ್ದಾರೆ.

ಜವಾನ್​ ಚಿತ್ರದಲ್ಲಿ ಶಾರೂಖ್​ಗೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದು, ವಿಜಯ್ ಸೇತುಪತಿ. ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ, ರಿದ್ಧಿ ಡೋಗ್ರಾ, ಸುನಿಲ್ ಗ್ರೋವರ್, ಯೋಗಿ ಬಾಬು ಮತ್ತು ಇತರ ಕಲಾವಿದರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಗೌರಿ ಖಾನ್ ನಿರ್ಮಾಣದ ಚಿತ್ರ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸೆಪ್ಟೆಂಬರ್ 7 ರಂದು ಬಿಡುಗಡೆಯಾಗಲಿದೆ,(ಏಜೆನ್ಸೀಸ್).