ನ್ಯೂಸ್

ನಟ ಶಾರುಖ್ ಖಾನ್ ಆಸ್ಪತ್ರೆಗೆ ದಾಖಲು: ಅಹಮದಾಬಾದ್​ನಲ್ಲಿ ಚಿಕಿತ್ಸೆ! ಏನಾಯ್ತು?

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಒಡೆತನದ ‘ಕೋಲ್ಕತ್ತಾ ನೈಟ್ ರೈಡರ್ಸ್’ ತಂಡ ಸುಲಭದಲ್ಲಿ ಈ ವರ್ಷದ ಐಪಿಎಲ್ ಫಿನಾಲೆಗೆ ಏರಿದೆ. ಹೈದರಾಬಾದ್ ನೀಡಿದ 159 ರನ್​ಗಳ ಗುರಿಯನ್ನು ಕೇವಲ 13.4 ಓವರ್​ಗಳಲ್ಲಿ ತಲುಪಿ ಕೆಕೆಆರ್​ ಗೆಲುವಿನ ನಗೆ ಬೀರಿದೆ. ಇದನ್ನು ಶಾರುಖ್​ ಖಾನ್​ ಅವರು ಸಂಭ್ರಮಿಸಿದ್ದಾರೆ. ಆದರೆ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ನಟ ಶಾರುಖ್​ ಖಾನ್​ ಅವರನ್ನು ಬುಧವಾರ ಮಧ್ಯಾಹ್ನ ಅಹಮದಾಬಾದ್‌ನ ಕೆಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ, ಮಂಗಳವಾರ ರಾತ್ರಿ ಐಪಿಎಲ್​ನ ಮೊದಲ ಪ್ಲೇ ಆಫ್​ ಪಂದ್ಯದ ವೇಳೆ ಹೀಟ್ ಸ್ಟ್ರೋಕ್‌ಗೆ ಒಳಗಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದರು ಎನ್ನಲಾಗಿದೆ.

ಆದರೆ ಈ ಬಗ್ಗೆ ಆಸ್ಪತ್ರೆ ಅಥವಾ ಕುಟುಂಬದವರು ಯಾವುದೇ ಮಾಹಿತಿ ನೀಡಿಲ್ಲ. ಈ ಬಗ್ಗೆ ಹೆಲ್ತ್​ ಅಪ್​ಡೇಟ್​ ನೀಡಬೇಕು ಎಂದು ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಒತ್ತಾಯಿಸಿದ್ದಾರೆ.