ಮುಂಬೈ: ರೈಲ್ವೆ ನಿಲ್ದಾಣದಲ್ಲಿ ಮೃತ ತಾಯಿಯ ಜತೆ ಆಟವಾಡಲು ಪ್ರಯತ್ನಿಸಿ ಎಲ್ಲರ ಮನ ಕಲಕುವಂತೆ ಮಾಡಿದ್ದ ಮಗುವಿನ ಸಹಾಯಕ್ಕೆ ನಟ ಶಾರುಖ್ ಖಾನ್ ಮುಂದಾಗಿದ್ದಾರೆ.
ಮಗುವನ್ನು ಅದರ ಅಜ್ಜ ಅಜ್ಜಿಯ ಬಳಿ ತಲುಪಿಸುವ ಕೆಲಸವನ್ನು ಶಾರುಖ್ ಖಾನ್‌ರ ಮೀರ್ ಸಂಸ್ಥೆ ಮಾಡಿದೆ. ಸದ್ಯ ಮಗುವನ್ನು ಅಜ್ಜಿಯ ಮನೆಗೆ ಕರೆದೊಯ್ಯಲಾಗಿದ್ದು ಆ ಮಗುವಿನ ಒಳಿತಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಶಾರುಖ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಮೀರ್ ಸಂಸ್ಥೆಯನ್ನು ಶಾರುಖ್ ಖಾನ್ ನಡೆಸುತ್ತಿದ್ದು, ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಕರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಸಂಸ್ಥೆಯ ವತಿಯಿಂದ 25 ಸಾವಿರ ಪಿಪಿಇ ಕಿಟ್‌ಗಳನ್ನು ಒದಗಿಸಿದ್ದಾರೆ.