ನಂಜನಗೂಡು: ಮುಸ್ಲೀಂ ಸಮುದಾಯದವರಿಗೆ ಶುಭ ಕಾರ್ಯ ನಡೆಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶಾದಿ ಮಹಲ್ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ನಗರಸಭೆಯ ಸಾಮಾನ್ಯ ನಿಧಿಯ ಅನುದಾನ 20ಲಕ್ಷ ವೆಚ್ಚದಲ್ಲಿ 9ನೇ ವಾರ್ಡ್ ಮುಸ್ಲೀಂ ಬ್ಲಾಕ್‌ನಲ್ಲಿ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನಗರದಲ್ಲಿ ಯಾವುದೇ ಶಾದಿ ಮಹಲ್ ಕಟ್ಟಡವಿರಲಿಲ್ಲ, ಮುಸ್ಲಿಂ ಸಮುದಾಯದವರ ಮನವಿ ಮೇರೆಗೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಶಂಕರ್, ಶ್ರೀಕಂಠನಾಯಕ, ನಗರಸಭಾ ಸದಸ್ಯ ರೆಹನಾಭಾನು, ಸಿದ್ದಿಖ್, ಎಸ್.ಪಿ.ಮಹೇಶ್, ಗಂಗಾಧರ್, ಎಚ್.ಎಸ್.ಮಹದೇವಸ್ವಾಮಿ, ಮಹದೇವಪ್ರಸಾದ್, ಗಾಯತ್ರಿ, ಕೆಪಿಸಿಸಿ ಸದಸ್ಯ ಅಕ್ಬರ್‌ಅಲಿಂ, ಅಬ್ದುಲ್‌ಖಾದರ್, ಅಜ್ಗರ್, ಸಿದ್ದಿಖ್‌ಅಹಮದ್, ನಾಸಿರುದ್ದೀನ್, ಎಂ.ಎನ್.ಮಂಜುನಾಥ್, ಪೌರಾಯುಕ್ತ ನಂಜುಂಡಸ್ವಾಮಿ, ಎಇಇ ಮಹೇಶ್ ಇತರರು ಇದ್ದರು.