ತಿ.ನರಸೀಪುರ: ತಾಲೂಕಿನ ಹೊರಳಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಷಡಕ್ಷರಿ, ಉಪಾಧ್ಯಕ್ಷರಾಗಿ ಸುಂದ್ರಪ್ಪ ಸೋಮವಾರ ಅವಿರೋಧವಾಗಿ ಆಯ್ಕೆಗೊಂಡರು.
ನೂತನ ಆಡಳಿತ ಮಂಡಳಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಯಾಗಿತ್ತು. ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಷಡಕ್ಷರಿ, ಹಿಂದುಳಿದ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸುಂದ್ರಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಸಂಘದ 12 ನಿರ್ದೇಶಕರ ಅನುಮೋದನೆ ಮೇರೆಗೆ ಚುನಾವಣಾಧಿಕಾರಿ ಜಿ.ಪ್ರೇಮಾ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಷಡಕ್ಷರಿ ಮಾತನಾಡಿ, ಸಂಘ 77 ವರ್ಷದಿಂದ ಹೊರಳಹಳ್ಳಿ ಹಾಗೂ ಕೈಯಂಬಳ್ಳಿ ಎರಡು ಗ್ರಾಮಗಳಿಂದ 220 ಷೇರುದಾರನು ಒಳಗೊಂಡಿದೆ. ಇಲ್ಲಿವರೆಗೂ ರೈತರಿಗೆ ಉತ್ತಮ ಸೇವೆವನ್ನು ಮಾಡಿಕೊಂಡು ಸಹಕಾರ ಸಂಘದಿಂದ ರೈತರಿಗೆ ಬೆಳೆಸಾಲ 2.5 ಕೋಟಿ ರೂ., ಮಹಿಳಾ ಸ್ವಸಹಾಯ ಸಂಘಕ್ಕೆ 1 ಕೋಟಿ ರೂ. ಸಾಲ ನೀಡಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ರೈತರನ್ನು ಇನ್ನೂ ಹೆಚ್ಚಿನ ಷೇರುದಾರನ್ನಾಗಿಸಿ, ಸರ್ಕಾರದ ಸವಲತ್ತುಗಳನ್ನು ಒದಗಿಸಲಾಗುವುದು ಎಂದರು.
ಸರ್ಕಾರದಿಂದ ಸಂಘದ ಷೇರುದಾರಿಗೆ ಬೆಳೆಸಾಲ, ಸೌಲಭ್ಯ ಹಾಗೂ ಯೋಜನೆಗಳನ್ನು ಸಮರ್ಪಕವಾಗಿ ತಲಿಪಿಸುವುದರ ಮೂಲಕ ಶ್ರಮಿಸಲಾಗುವುದು ಎಂದು ತಿಳಿಸಿದರು.
ಸಂಘದ ನಿರ್ದೇಶಕರಾದ ರಾಚಯ್ಯ, ಎಚ್.ಎಂ.ದಶಕಂಠ, ನಂಜುಂಡೇಗೌಡ, ಎಚ್.ಎಂ.ಮಹದೇವಸ್ವಾಮಿ, ಎಚ್.ಎನ್. ಕಾಮಾಕ್ಷಿ, ಎಚ್.ಎಂ.ಶಿವಮ್ಮ, ಎಂ.ಮಲ್ಲೇಗೌಡ, ದೊಡ್ಡಯ್ಯ, ಕೃಷ್ಣ, ಎಚ್.ಪಿ.ವರದರಾಜು, ಎಚ್.ಎಂ.ಗುರುಸ್ವಾಮಿ, ಚಂದ್ರು, ಎಚ್.ಎಂ ಶಿವರಾಜು, ಎಂ.ಲಿಂಗಯ್ಯ, ಡಾ.ಡಿ.ಮಹದೇವಸ್ವಾಮಿ(ವಜ್ರಿ), ಹಿರಿಯ ಮುಖಂಡ ಸೋಸಲೆ ಮಹದೇವಸ್ವಾಮಿ, ಮಹಾದೇವಸ್ವಾಮಿ, ತಾ.ಪಂ ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ಉಕ್ಕಲಗೆರೆ ಬಸವಣ್ಣ, ಮುಖ್ಯ ಕಾರ್ಯನಿರ್ವಾಹಕ ಗವಿಗೌಡ, ಶಿವರಾಜು, ಮಹದೇವಸ್ವಾಮಿ, ಡಿ.ಎಸ್.ಪ್ರೇಮಕುಮಾರ್, ಮಹದೇವಯ್ಯ, ಇತರರು ಹಾಜರಿದ್ದರು.