ನ್ಯೂಸ್

ಶಬರಿಮಲೆ ಪ್ರಕರಣಕ್ಕೆ 9 ಸದಸ್ಯರ ಪೀಠ; 13ರಿಂದ ವಿಚಾರಣೆ ಆರಂಭ

ನವದೆಹಲಿ: ಶಬರಿಮಲೆ ದೇವಸ್ಥಾನಕ್ಕೆ 10ರಿಂದ 50 ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಗಾಗಿ ಸುಪ್ರೀಂಕೋರ್ಟ್​ನ ಒಂಬತ್ತು ಸದಸ್ಯರ ಪೀಠವನ್ನು ಮಂಗಳವಾರ ರಚಿಸಲಾಗಿದೆ.

ಸಿಜೆಐ ಎಸ್.ಎ. ಬೊಬ್ಡೆ, ನ್ಯಾಯಮೂರ್ತಿಗಳಾದ ಆರ್. ಭಾನುಮತಿ, ಅಶೋಕ್ ಭೂಷಣ್, ಎಲ್. ನಾಗೇಶ್ವರ ರಾವ್, ಮೋಹನ್ ಎಂ. ಶಾಂತನಗೌಡರ್, ಎಸ್. ಅಬ್ದುಲ್ ನಜೀರ್, ಆರ್. ಸುಭಾಷ್ ರೆಡ್ಡಿ, ಬಿ. ಆರ್. ಗವಾಯ್ ಮತ್ತು ಸೂರ್ಯಕಾಂತ್ ಪೀಠದಲ್ಲಿರುವ ಸದಸ್ಯರು. ಹಿಂದೆ ತೀರ್ಪು ನೀಡಿದ್ದ ಪೀಠದಲ್ಲಿದ್ದ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಮತ್ತು ಡಿ.ವೈ ಚಂದ್ರಚೂಡ್ ಹೊಸ ಪೀಠದಲ್ಲಿ ಇಲ್ಲ. ಮಹಿಳೆಯರ ಪ್ರವೇಶ ನಿಷೇಧವನ್ನು ಅಸಿಂಧುಗೊಳಿಸಿ ಸುಪ್ರೀಂ ಕೋರ್ಟ್ 2018ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯನ್ನು ಸವೋನ್ನತ ನ್ಯಾಯಾಲಯದ ಒಂಬತ್ತು ಸದಸ್ಯರ ಪೀಠ ಮುಂದಿನ ಸೋಮವಾರ (ಜನವರಿ 13) ಆರಂಭಿಸಲಿದೆ.