ನ್ಯೂಸ್

ಲೈಂಗಿಕ ಸಂಪರ್ಕ ಹೊಂದಲು ವ್ಯಕ್ತಿಯೊಬ್ಬರು ಎತ್ತುಗಳ ಸಂತಾನೋತ್ಪತ್ತಿಗೆ ಬಳಸುವ ಲೈಂಗಿಕ ಉತ್ತೇಜಕ ಸೇವಿಸಿ ಎದುರಿಸಿದ ಪರಿಣಾಮ ಏನು?

ಮೆಕ್ಸಿಕೊ ಸಿಟಿ: ಎತ್ತುಗಳ ಸಂತಾನೋತ್ಪತ್ತಿಗೆ ಬಳಸುವ ಲೈಂಗಿಕ ಉತ್ತೇಜಕವನ್ನು ವ್ಯಕ್ತಿಯೊಬ್ಬರು ಸೇವಿಸಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿರುವ ವಿಲಕ್ಷಣ ಪ್ರಕರಣ ನಡೆದಿದೆ.

ಉತ್ತೇಜಕ ಸೇವಿಸುತ್ತಿದ್ದಂತೆ ಜನನಾಂಗ ತೀವ್ರವಾಗಿ ಉದ್ರೇಕಗೊಂಡು ನೋವು ಆರಂಭಗೊಂಡ ಪರಿಣಾಮ ಅವರು ಅಮೆರಿಕಾ ಹಾಗೂ ಮೆಕ್ಸಿಕೊ ಗಡಿ ನಗರ ರೇನೋಸಾದ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದಾರೆ.

ವೆರಾಕ್ರಜ್ನದಲ್ಲಿ ವಾಸಿಸುತ್ತಿರುವ ಆ ವ್ಯಕ್ತಿ ಮಹಿಳೆ ಜತೆ ಲೈಂಗಿಕ ಸಂಪರ್ಕ ಹೊಂದಲು ಮುಂದಾದರು. ಈ ವೇಳೆ ವೆರಾಕ್ರಜ್ನದಲ್ಲಿ ಲೈಂಗಿಕ ಉತ್ತೇಜಕ ಖರೀದಿಸಿ ಸೇವಿಸಿದರು. ನಂತರ ಸತತವಾಗಿ ಮೂರು ದಿನಗಳ ಕಾಲ ಜನನಾಂಗ ತೀವ್ರವಾಗಿ ಉತ್ತೇಜನಗೊಂಡಿತ್ತು. ಅಲ್ಲದೆ ನೋವು ಅಧಿಕವಾಗತೊಡಗಿತು. ನೋವು ತಾಳಲಾರದೆ ಅವರು ಆಸ್ಪತ್ರೆಗೆ ದಾಖಲಾದರು ಎಂದು ಲಾ ರಿಪಬ್ಲಿಕ್​ ಪತ್ರಿಕೆ ವರದಿ ಮಾಡಿದೆ.

ವಕ್ತಿ ಸೇವಿಸಿದ ಔಷಧಿಯನ್ನು ವೆರಾಕ್ರಜ್ನದಲ್ಲಿ ಎತ್ತುಗಳನ್ನು ಉತ್ತೇಜಿಸಲು ಬಳಸುತ್ತಾರೆ. ಇದೇ ಔಷಧಿಯನ್ನು ಇವರು ಸೇವಿಸಿ ತೊಂದರೆಗೆ ಸಿಲುಕಿದ್ದಾರೆ. ಈ ಉತ್ತೇಜಕ ಸೇವಿಸಿದರೆ ಜನನಾಂಗ ದೀರ್ಘಕಾಲ ಉತ್ತೇಜನಗೊಂಡಿರುತ್ತದೆ.

ಅಲ್ಲದೆ ನೋವು ಅಧಿಕಗೊಂಡಿರುತ್ತದೆ. ತ್ವರಿತವಾಗಿ ಚಿಕಿತ್ಸೆ ಪಡೆಯದಿದ್ದರೆ ಜನನಾಂಗ ಶಾಶ್ವತವಾಗಿ ಹಾನಿಯಾಗುತ್ತದೆ ಎಂದು ವೈದ್ಯಕೀಯ ವರದಿ ತಿಳಿಸಿದೆ.

ಈ ಉತ್ತೇಜಕ ಸೇವಿಸಿದಾಗ ಸಾಮಾನ್ಯವಾಗಿ 4 ತಾಸುಗಳ ಕಾಲ ಲೈಂಗಿಕತೆ ಪರಾಕಷ್ಟತೆ ತಲುಪುತ್ತದೆ. ನಂತರ ಕಡಿಮೆಯಾಗುತ್ತದೆ. ಅಪರೂಪದ ಸಂದರ್ಭಗಳಲ್ಲಿ ಹೆಚ್ಚು ಅವಧಿ ಮುಂದುವರೆದರೆ ಅಪಾಯ ಎದುರಾಗುತ್ತದೆ. ಈ ಉತ್ತೇಜಕ ಸೇವಿಸಿರುವ ವ್ಯಕ್ತಿಗೆ ಸತತವಾಗಿ 3 ದಿನಗಳ ಕಾಲ ಪರಿಣಾಮ ಬೀರಿದೆ. ವೈದ್ಯರು ಇವರಿಗೆ ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)