ಅಹಮದಾಬಾದ್: 14 ವರ್ಷದ ಬಾಲಕ ವೈದ್ಯ ಎಂದು ಹೇಳಿಕೊಂಡ ವ್ಯಕ್ತಿಯಿಂದ ಲೈಂಗಿಕ ಕಿರುಕುಳ ಅನುಭವಿಸಿರುವುದಾಗಿ ಆರೋಪಿಸಿದ್ದು, ಆರೋಪಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಗುಜರಾತ್‌ನ ಭಾವನಗರದ COVID-19 ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಜುಲೈ 1 ರಂದು ಬಾಲಕ ಮತ್ತು ಅವನ ತಾಯಿ ಭಾವನಗರದಲ್ಲಿರುವ ಅಜ್ಜ ಮನೆಗೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ಆತನ ತಾಯಿಗೆ ದೈಹಿಕ ಉಷ್ಣತೆ ಹೆಚ್ಚಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆಕೆಯನ್ನು ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿದ್ದು, ಆಕೆಯನ್ನು ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಯಿತ್ತು. ಜುಲೈ 4 ರಂದು ಮಧ್ಯಾಹ್ನ ಮಹಿಳೆಯ ಸ್ಥಿತಿ ಹದಗೆಟ್ಟಿತು ಮತ್ತು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಾಲಕನ ತಾಯಿಯನ್ನು ಕೇಂದ್ರದ ಒಂದು ಪ್ರತ್ಯೇಕ ಕೋಣೆಯಲ್ಲಿ ದಾಖಲಿಸಲಾಗಿತ್ತು. ಬಾಲಕ ಅಲ್ಲಿ ಭೇಟಿ ನೀಡುತ್ತಿದ್ದ.
ಜುಲೈ 4 ರಂದು ಆಸ್ಪತ್ರೆಯ ಕೋಣೆಯೊಂದರಲ್ಲಿ ಹುಡುಗ ಒಬ್ಬನೇ ಇರುವಾಗ ಅಪರಿಚಿತ ವ್ಯಕ್ತಿಯೊಬ್ಬ ಬಂದ. ಬಿಳಿ ಶರ್ಟ್ ಮತ್ತು ಮಾಸ್ಕ್ ಧರಿಸಿದ್ದ ಆ ವ್ಯಕ್ತಿ ತನ್ನನ್ನು ವೈದ್ಯ ಎಂದು ಪರಿಚಯಿಸಿಕೊಂಡ.
ಬಾಲಕನ ನಾಡಿಮಿಡಿತವನ್ನು ಪರೀಕ್ಷಿಸುವುದಾಗಿ ಹೇಳಿದ. ಅದೇ ನೆಪದಲ್ಲಿ ಅವನೊಂದಿಗೆ ಅನುಚಿತವಾಗಿ ವರ್ತಿಸಿದ. ಆ ಹುಡುಗನಿಗೆ ಬಟ್ಟೆ ಬಿಚ್ಚಿ ನೆಲದ ಮೇಲೆ ಮಲಗಲು ಆರೋಪಿ ಹೇಳಿ ನಂತರ ಆತನ ಮೇಲೆ ಬಲವಂತವಾಗಿ ಮಲಗಿದ ಎಂದು ಆರೋಪಿಸಲಾಗಿದೆ.
ಆರೋಪಿಯ ವಿರುದ್ಧ ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ಸೆಕ್ಷನ್ 12ರ ಅಡಿ ನೀಲಮ್ ಬಾಗ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.