ಬೆಂಗಳೂರು: ಇತ್ತೀಚೆಗೆ ರಾಜ್ಯದ ಮಾಜಿ ಸಚಿವರೊಬ್ಬರ ಅಶ್ಲೀಲ ಸಿಡಿ ಪ್ರಕರಣ ಸಂಚಲನ ಸೃಷ್ಟಿಸಿದ್ದು ಜನಮಾನಸದಲ್ಲಿನ್ನೂ ನೆನಪಿನಲ್ಲಿ ಇರುವಾಗಲೇ ಮತ್ತೊಬ್ಬ ರಾಜಕಾರಣಿಯ ಕಾಮವಾಂಛೆಯ ವಿಡಿಯೋ ವೈರಲ್ ಆಗಿದೆ.
ಅದರಲ್ಲೂ ಈ ಸಲ ಕೇಂದ್ರದ ಮಾಜಿ ಸಚಿವರೊಬ್ಬರು ಅದರಲ್ಲೂ ಮುಖ್ಯಮಂತ್ರಿ ಆಗಿದ್ದವರೇ ಈ ಪ್ರಕರಣದಲ್ಲಿ ಕಂಡುಬಂದಿರುವುದು ಆಡಳಿತಾರೂಢ ಪಕ್ಷಕ್ಕೆ ಮುಜುಗರ ಉಂಟು ಮಾಡುವಂತೆಯೂ ಆಗಿದೆ. ಈ ರಾಜಕಾರಣಿಯು ಯುವತಿಯೊಬ್ಬಳ ಜೊತೆ ವಿಡಿಯೋ ಕಾಲ್ನಲ್ಲಿ ಅಸಭ್ಯವಾಗಿ ಮಾತನಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ಕುರಿತ ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಟೀಕೆ, ರಾಜಕೀಯ ಪಕ್ಷಗಳ ಬೆಂಬಲಿಗರಿಂದ ಕಾಲೆಳೆತ-ಸಮರ್ಥನೆಯಂಥ ಪೋಸ್ಟ್ಗಳೂ ಸೋಷಿಯಲ್ ಮೀಡಿಯಾದಲ್ಲಿ ಕಂಡುಬಂದಿವೆ. ಇನ್ನೊಂದೆಡೆ ಇದು ಫೇಕ್ ವಿಡಿಯೋ, ತೇಜೋವಧೆ ಮಾಡಲು ಕಿಡಿಗೇಡಿಗಳು ಸೃಷ್ಟಿಸಿದ ವಿಡಿಯೋ ಎನ್ನುವ ವಾದಗಳೂ ಕೇಳಿಬಂದಿವೆ.