POCSO : ಬಾಲಕಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 22 ವರ್ಷದ ವ್ಯಕ್ತಿಯನ್ನು ಪೋಕ್ಸೋ ಕಾಯ್ದೆ ಅಡಿ ಮುಂಬೈನ ಗಾಮ್ದೇವಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಆಕಾಶ್ ಪ್ರಕಾಶ್ ಪವಾರ್ (22) ಆರೋಪಿ ಎಂದು ಗುರುತಿಸಲಾಗಿದೆ. ಇನ್ನು ಈತನನ್ನು ಗಾಮ್ದೇವಿ ಪೊಲೀಸರು ಬಂಧಿಸಿದ್ದು, 2022ರಲ್ಲಿ ಐಪಿಸಿಯ ಸೆಕ್ಸನ್ 363, 366A, 376(2) (H) (N), 506 ಮತ್ತು POSCO ಕಾಯ್ದೆ, 2012 ರ ಸೆಕ್ಸನ್ 4,8,12 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿ ವಿಚಾರಣಾ ಸಮಯದಲ್ಲಿ ಹಾಜರಾಗಲು ವಿಫಲವಾದ ಕಾರಣ ಆತನ ವಿರುದ್ಧ ಮುಂಬೈ ಸೆಷನ್ಸ್ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ನ್ನು ಹೊರಡಿಸಿತ್ತು.
ಇದನ್ನೂ ಓದಿ: ಈ 3 ರಾಶಿಯವರಿಗೆ ಕೊಳಕೆಂದರೆ ಆಗುವುದಿಲ್ಲ, ಎಲ್ಲವು ಶುಚಿಯಾಗಿರಬೇಕಂತೆ! ನಿಮ್ಮದೂ ಇದೇ ರಾಶಿನಾ? Zodiac signs
ಆರೋಪಿ ಆಕಾಶ್ನನ್ನು ಭಾನುವಾರ (ಆಗಸ್ಟ್ 24) ಗ್ರಾಂಟ್ ರೈಲ್ವೆ ನಿಲ್ದಾಣ ಬಳಿ ಅಧಿಕಾರಿಗಳ ತಂಡ ಆತನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಇನ್ನು ಆರೋಪಿ ಕೆಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನ್ನು ಬಂಧಿಸುವಂತೆ ಆದೇಶ ಹೊರಡಿಸಿದೆ. (ಏಜೆನ್ಸೀಸ್)