ನ್ಯೂಸ್

ಭೀಕರ ಹಿಮಪಾತ: ಐವರು ವಿದೇಶಿ ಪರ್ವತಾರೋಹಿಗಳು ಸೇರಿ 7 ಜನರು ಮೃತ!

ನೇಪಾಳ: ನೇಪಾಳದ ಡೋಲಾಖಾ ಜಿಲ್ಲೆಯ ಯಲುಂಗ್ ರಿ ಶಿಖರದ ಮೂಲ ಶಿಬಿರಕ್ಕೆ ಅಪ್ಪಳಿಸಿದ ಹಿಮಪಾತದಲ್ಲಿ ಐದು ವಿದೇಶಿ ಪರ್ವತಾರೋಹಿಗಳು ಸೇರಿದಂತೆ ಕನಿಷ್ಠ 7 ಪರ್ವತಾರೋಹಿಗಳು ಸೋಮವಾರ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮೃತರಲ್ಲಿ ಮೂವರು ಅಮೇರಿಕನ್, ಒಬ್ಬ ಕೆನಡಾ, ಒಬ್ಬ ಇಟಾಲಿಯನ್ ಮತ್ತು ಇಬ್ಬರು ನೇಪಾಳಿ ಪ್ರಜೆಗಳು ಸೇರಿದ್ದಾರೆ ಎಂದು ಪೊಲೀಸರ ತಿಳಿಸಿದ್ದಾರೆ.

ರೋಲ್ವಾಲಿಂಗ್ ಕಣಿವೆಯಲ್ಲಿರುವ 5,630 ಮೀಟರ್ ಎತ್ತರದ ಶಿಖರದ ಮೂಲ ಶಿಬಿರಕ್ಕೆ ಅಪ್ಪಳಿಸಿದ ಹಿಮಪಾತದಲ್ಲಿ 7 ಜನರು ಸಾವನ್ನಪ್ಪಿದ್ದಾರೆ, ನಾಲ್ವರು ಗಾಯಗೊಂಡಿದ್ದಾರೆ ಮತ್ತು ಇತರ ನಾಲ್ವರು ಕಾಣೆಯಾಗಿದ್ದಾರೆ. ಹೆಲಿಕಾಪ್ಟರ್ ಇಂದು ಹಾರಲು ಪ್ರಯತ್ನಿಸಿತ್ತು. ಆದರೆ, ಪ್ರತಿಕೂಲ ಹವಾಮಾನದಿಂದಾಗಿ ಅದು ಅಡ್ಡಿಯಾಯಿತು. ನಾವು ನಾಳೆ ಬೆಳಿಗ್ಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸುತ್ತೇವೆ," ಎಂದು ಡೋಲಾಖಾದ ಜಿಲ್ಲಾ ಪೊಲೀಸ್ ಕಚೇರಿಯ ಉಪ ಪೊಲೀಸ್ ವರಿಷ್ಠಾಧಿಕಾರಿ ಜ್ಞಾನ್ ಕುಮಾರ್ ಮಹಾತೊ ಸುದ್ದಿಸಂಸ್ಥೆ ANI ಗೆ ತಿಳಿಸಿದ್ದಾರೆ.(ಏಜೆನ್ಸೀಸ್​)