ನ್ಯೂಸ್

ಅಸ್ಸಾಂನಲ್ಲಿ ಕೋಲ್ಕತ್ತಾ-ಸೈರಾಂಗ್ ಎಕ್ಸ್‌ಪ್ರೆಸ್ ರೈಲು ಭೀಕರ ಅಪಘಾತ: 7 ಬೋಗಿಗಳು ಹಳಿತಪ್ಪಿ ಹಲವರಿಗೆ ಗಾಯ

  • ಕೋಲ್ಕತ್ತಾ-ಸೈರಾಂಗ್ ಎಕ್ಸ್‌ಪ್ರೆಸ್ ರೈಲಿನ ಏಳು ಬೋಗಿಗಳು ಹಳಿ ತಪ್ಪಿದ ಪರಿಣಾಮ ಹಲವರಿಗೆ ಗಾಯ.

  • ಮಿಜೋರಾಂನಿಂದ ಕೋಲ್ಕತ್ತಾದತ್ತ ಪ್ರಯಾಣಿಸುತ್ತಿದ್ದ ಕೋಲ್ಕತ್ತಾ-ಸೈರಾಂಗ್ ಎಕ್ಸ್‌ಪ್ರೆಸ್.

  • ಗಾಯಗೊಂಡವರ ಸಂಖ್ಯೆ ಎಷ್ಟು ಮತ್ತು ಆಗಿರುವ ಹಾನಿಯ ಪ್ರಮಾಣದ ಕುರಿತು ನಿಖರ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ಗುವಾಹಟಿ: ಅಸ್ಸಾಂನ ಗುವಾಹಟಿ ಹೊರವಲಯದ ಡಿಗರು ಬಳಿ ಇಂದು ಮುಂಜಾನೆ ಭೀಕರ ರೈಲು ಅಪಘಾತ ಸಂಭವಿಸಿದೆ. ಕೋಲ್ಕತ್ತಾ-ಸೈರಾಂಗ್ ಎಕ್ಸ್‌ಪ್ರೆಸ್ ರೈಲಿನ ಏಳು ಬೋಗಿಗಳು ಹಳಿತಪ್ಪಿದ ಪರಿಣಾಮ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ.

ಮಿಜೋರಾಂನಿಂದ ಕೋಲ್ಕತ್ತಾದತ್ತ ಪ್ರಯಾಣಿಸುತ್ತಿದ್ದ ಈ ಪ್ರಯಾಣಿಕರ ರೈಲು ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಅದರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಇಂದು ಮುಂಜಾನೆ ಈ ದುರ್ಘಟನೆ ಸಂಭವಿಸಿದ್ದು, ರೈಲು ಹಳಿತಪ್ಪಲು ನಿಖರವಾದ ಕಾರಣವೇನು, ಗಾಯಗೊಂಡವರ ನಿಖರ ಸಂಖ್ಯೆ ಎಷ್ಟು ಮತ್ತು ಆಗಿರುವ ಹಾನಿಯ ಪ್ರಮಾಣದ ಕುರಿತು ಸಂಪೂರ್ಣ ಮಾಹಿತಿ ಇನ್ನು ಲಭ್ಯವಾಗಬೇಕಿದೆ.