ನವದೆಹಲಿ: ರಸ್ತೆ ಸಾರಿಗೆ ನಿಯಮದ ಪ್ರಕಾರ, ಸಾಮಾನ್ಯವಾಗಿ ಮೂರು ಜನ ಒಂದೇ ಬೈಕ್‌ನಲ್ಲಿ ಪ್ರಯಾಣಿಸಿದರೆ ದಂಡ ವಿಧಿಸಲಾಗುತ್ತದೆ. ಒಂದೇ ಬೈಕ್‌ನಲ್ಲಿ ಏಳು ಜನ, ಎರಡು ನಾಯಿ, ಕೋಳಿನ್ನು ಬೈಕ್ ಮೇಲೆ ಕೂರಿಸಿಕೊಂಮಡು ಪ್ರಯಾಣಿಸುತ್ತೀರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ವೈರಲ್ ಆಗಿರುವ ಈ ವೀಡಿಯೋದಲ್ಲಿ ಏನಿದೆ?: ವೀಡಿಯೋ ಪ್ರಕಾರ, ಇಡೀ ಕುಟುಂಬ ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದೆ ಎಂದು ಹೇಳಬಹುದು. ಬೈಕ್ ಓಡಿಸುವ ವ್ಯಕ್ತಿ, ಅವನ ಮುಂದೆ ಇಬ್ಬರು ಮಕ್ಕಳು, ಅವನ ಹಿಂದೆ ಅವನ ಹೆಂಡತಿ, ಅವಳ ಮೇಲೆ ಒಂದು ಮಗು. ಆ ಮಗುವಿನ ಹಿಂದೆ ಇನ್ನಿಬ್ಬರು ಮಕ್ಕಳು ಕುಳಿತಿದ್ದಾರೆ. ಅವರೊಂದಿಗೆ ಎರಡು ನಾಯಿಮರಿಗಳು ಮತ್ತು ಕೋಳಿಗಳಿವೆ. ಇದಲ್ಲದೇ ಅವರ ಬಳಿ ಸ್ವಲ್ಪ ಹೆಚ್ಚು ಲಗೇಜ್ ಕೂಡ ಇರುವುದನ್ನು ನಾವು ನೋಡಬಹುದಾಗಿದೆ.
ಬೈಕ್ ಚಲಾಯಿಸುತ್ತಿದ್ದ ಮತ್ತೊಬ್ಬ ವ್ಯಕ್ತಿ ಈ ವಿಡಿಯೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋಗೆ ನೆಟಿಜನ್‌ಗಳು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಛೀಮಾರಿ ಹಾಕುತ್ತಾ ಕಾಮೆಂಟ್ ಹಾಕುತ್ತಿದ್ದರೆ.. ಇನ್ನು ಕೆಲವರು ತಮಾಷೆ ಮಾಡುತ್ತಿದ್ದಾರೆ. ಇದು ನಿಜಕ್ಕೂ ದೊಡ್ಡ ಸಾಹಸವೇ.. ಆ ಬೈಕ್ ಓಡಿಸಿದ ವ್ಯಕ್ತಿಗೆ ನಮಸ್ಕಾರಗಳು,.. ಇಷ್ಟು ಜನರ ಜೀವದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ ಎಂಬ ಕಾಮೆಂಟ್ಗಳು ಹರಿದಾಡುತ್ತಿವೆ.
ಕೆಲವರು ಈ ವಿಡಿಯೋ ನೋಡಿ ವಿವಿಧ ಮಾಧ್ಯಮಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಆದರೆ ಈ ವಿಡಿಯೋ ಎಲ್ಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಕ್ಲಿಪ್ ನೋಡಿದ ನೆಟ್ಟಿಗರು ಆತಂಕಕ್ಕೆ ಒಳಗಾಗಿದ್ದಾರೆ.