ನವದೆಹಲಿ: ಕೌಟುಂಬಿಕ ದೌರ್ಜನ್ಯ ತಡೆ ಕಾನೂನು ರೂಪಿಸಿ 2 ದಶಕಗಳಿಗೂ ಹೆಚ್ಚು ಕಾಲವಾದರೂ ದೇಶಾದ್ಯಂತ ಅನುಷ್ಠಾನ ಅಸಮಾನವಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ಅದರ ಸಮರ್ಪಕ ಜಾರಿಗಾಗಿ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ 7 ನಿರ್ದೇಶನಗಳನ್ನು ನೀಡಿದೆ. ಕೌಟುಂಬಿಕ ದೌರ್ಜನ್ಯಗಳ ಸಂತ್ರಸ್ತರಿಗೆ ನೆರವಾಗಲು 6 ವಾರದ ಒಳಗೆ ರಕ್ಷಣಾ ಅಧಿಕಾರಿಗಳನ್ನು ನೇಮಿಸುವಂತೆ ಆದೇಶಿಸಿದೆ. ಸಪ್ತ ನಿರ್ದೇಶನಗಳು ಈ ಕಾನೂನನ್ನು ಎಲ್ಲ ರೀತಿ ಅನುಷ್ಠಾನ ಗೊಳಿಸುವುದನ್ನು ಖಾತರಿಪಡಿಸುವ ಆರಂಭಿಕ ಹೆಜ್ಜೆ ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ, ಸತೀಶ್ಚಂದ್ರ ಶಮಾ ಇದ್ದ ಪೀಠ ಮೇ 20ರ ಆದೇಶದಲ್ಲಿ ತಿಳಿಸಿದೆ. ಆದೇಶದ ವಿಸõತ ಪ್ರತಿಯನ್ನು ಮಂಗಳವಾರ ಸುಪ್ರೀಂಕೋರ್ಟ್ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
1. ಜಿಲ್ಲೆ ಮತ್ತು ತಾಲೂಕು ಮಟ್ಟದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಅಧಿಕಾರಿಗಳನ್ನು ಗುರುತಿಸಿ ರಕ್ಷಣಾ ಅಧಿಕಾರಿಗಳೆಂದು ನೇಮಿಸಬೇಕು.
2. ಈ ನೇಮಕಾತಿ ಮತ್ತು ಅಧಿಕಾರಿಗಳು ಕರ್ತವ್ಯ ನಿರ್ವಹಿಸುವುದನ್ನು ಖಾತರಿಪಡಿಸುವಂತೆ ರಾಜ್ಯ/ಯುಟಿಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಇಲಾಖೆಯ ಕಾರ್ಯದರ್ಶಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ರಕ್ಷಣಾ ಅಧಿಕಾರಿಗಳು ಇನ್ನೂ ನೇಮಕವಾಗದಿರುವ ಕಡೆ ಆರು ವಾರದೊಳಗೆ ಆ ಪ್ರಕ್ರಿಯೆ ಮುಗಿಸಬೇಕು.
3. ಸಂತ್ರಸ್ತರಿಗೆ ಕಾನೂನಿನ ಕುರಿತು ಅರಿವು ಮೂಡಿಸಬೇಕು ಹಾಗೂ ಪೊಲೀಸ್ ಅಧಿಕಾರಿಗಳು ಹಾಗೂ ನ್ಯಾಯಾಂಗ ಸೇವೆಗಳ ಸದಸ್ಯರ ಸಹಿತ ಸರ್ಕಾರಿ ಅಧಿಕಾರಿಗಳಿಗೆ ನಿಯಮಿತ ತರಬೇತಿ ನೀಡಬೇಕು.
4. ಕಾನೂನಿನ ಜಾರಿ ಹೊಣೆ ನಿಗದಿಪಡಿಸಿರುವ 11ನೇ ಸೆಕ್ಷನ್ಅನ್ನು ಕೇಂದ್ರ ಸರ್ಕಾರ ಪರಿಪಾಲಿಸಬೇಕು.
5. 1987ರ ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನಿನನ್ವಯ ಕೌಟುಂಬಿಕ ದೌರ್ಜನ್ಯ ಸಂತ್ರಸ್ತರಿಗೆ ಉಚಿತ ಕಾನೂನು ಸೇವೆಯ ನೆರವು ಒದಗಿಸಬೇಕು.
6. ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದ ಕಾನೂನು ಸೇವೆಗಳ ಪ್ರಾಧಿಕಾರಗಳ ಸದಸ್ಯ ಕಾರ್ಯದರ್ಶಿಗಳು ಈ ಅಂಶದ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು.
7. ಸಂತ್ರಸ್ತರಿಗೆ ಆಶ್ರಯ ತಾಣಗಳು ಸಿಗುವುದನ್ನು 10 ವಾರದೊಳಗೆ ಖಾತರಿಪಡಿಸಬೇಕು.
ಕಾನೂನು ಮಾಡಿದ್ದ ಮಾತ್ರಕ್ಕೆ ನ್ಯಾಯಾಂಗ ನಿಂದನೆಯಾಗದು
ನವದೆಹಲಿ: ಸಂಸತ್ತು ಅಥವಾ ರಾಜ್ಯ ಶಾಸನಸಭೆಗಳು ಕಾನೂನು ರೂಪಿಸಿದ ಮಾತ್ರಕ್ಕೆ ಅದರಿಂದ ನ್ಯಾಯಾಂಗ ನಿಂದನೆ ಆಗಿದೆಯೆಂದು ಹೇಳಲಾಗದು ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ದೆಹಲಿ ವಿವಿ ಮಾಜಿ ಪ್ರಾಧ್ಯಾಪಕಿ ನಂದಿನಿ ಸುಂದರ್ ಮತ್ತಿತರರು 2012ರಲ್ಲಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಲೇವಾರಿ ಮಾಡಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶಮಾ ಇದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಸಲ್ವಾ ಜುಡುಂನಂಥ ಜಾಗೃತ ಗುಂಪುಗಳಿಗೆ ಬೆಂಬಲ ಹಾಗೂ ಮಾವೋವಾದಿಗಳ ವಿರುದ್ಧದ ಹೋರಾಟದಲ್ಲಿ ಬುಡಕಟ್ಟು ಜನರಿಗೆ ಶಸ್ತಾŠಸ್ತŠ ಒದಗಿಸುವುದನ್ನು ನಿಲ್ಲಿಸುವಂತೆ 2011ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನಗಳನ್ನು ಪಾಲಿಸಲು ಛತ್ತೀಸ್ಗಢ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ನ್ಯಾಯಾಲಯ ಅಗೌರವ ಅರ್ಜಿಯನ್ನು ಸಲ್ಲಿಸಲಾಗಿತ್ತು.