ಬೆಂಗಳೂರು: ರಾಜ್ಯದಲ್ಲಿರುವ 148 ನಿಗಮ/ಮಂಡಳಿಗಳ ಪೈಕಿ ಏಳು ನಿಗಮಗಳನ್ನು ಮುಚ್ಚಲು ಮತ್ತು 9 ಸಂಸ್ಥೆಗಳನ್ನು ವಿಲೀನಗೊಳಿಸಲು ರಾಜ್ಯ ಆಡಳಿತ ಸುಧಾರಣಾ ಆಯೋಗ-2 ಸರ್ಕಾರಕ್ಕೆ ಶಿಫಾರಸು ಮಾಡಿದೆ.
ವಿಧಾನಸೌಧದಲ್ಲಿ ಗುರುವಾರ ಆಯೋಗದ ಅಧ್ಯಕ್ಷ ಎಚ್.ಕೆ.ಪಾಟೀಲ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯಗೆ 9ನೇ ವರದಿ ಸಲ್ಲಿಸಿತು. ಆ ನಂತರ ಸುದ್ದಿಗೋಷ್ಠಿ ನಡೆಸಿದ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, 9ನೇ ವರದಿಯಲ್ಲಿ ಮಂಡಳಿ, ನಿಗಮಗಳು, ಸರ್ಕಾರಿ ಸಂಘ, ಪ್ರಾಧಿಕಾರಗಳ ಮರು ರಚನೆ, ಭೂಸ್ವಾಧೀನ ಮತ್ತು ಸಂಬಂಧಿಸಿದ ಸುಧಾರಣೆ ಮತ್ತು ಸಾಮಾನ್ಯ ಆಡಳಿತಾತ್ಮಕ, ಹಣಕಾಸು ಮತ್ತು ಇ-ಆಡಳಿತ ಸುಧಾರಣೆ ವಿಷಯಗಳಲ್ಲಿ 449 ಹೊಸ ಶಿಫಾರಸು ಮಾಡಲಾಗಿದೆ ಎಂದರು.
148 ನಿಗಮ, ಮಂಡಳಿಗಳ ಪೈಕಿ 82 ಸಂಸ್ಥೆಗಳ ಜತೆಗೆ ಸಭೆ ನಡೆಸಿ ಕಳೆದ 5 ವರ್ಷಗಳ ಆರ್ಥಿಕ ವ್ಯವಹಾರ, ಅಧಿಕಾರಿ/ಸಿಬ್ಬಂದಿ ಕೆಲಸ ಕಾರ್ಯ, ಕಾರ್ಯಚಟುವಟಿಕೆಗಳ ಬಗ್ಗೆ ವರದಿ ಪಡೆಯಲಾಗಿದೆ. ಇದರ ಆಧಾರದ ಮೇಲೆ ರಾಜ್ಯ ಸಮಾಜ ಕಲ್ಯಾಣ ಮಂಡಳಿ, ರಾಜ್ಯ ಸಂಯಮ ಮಂಡಳಿ, ಸಹಕಾರಿ ಕೋಳಿ ಸಾಕಾಣಿಕೆ ಒಕ್ಕೂಟ, ಕರ್ನಾಟಕ ಪಲ್ಪ್‌ವುಡ್ ಲಿಮಿಟೆಡ್, ರಾಜ್ಯ ಆಗ್ರೋ-ಕಾರ್ನ್ ಪ್ರಾಡಕ್ಟ್ ್ಸ ಲಿಮಿಟೆಡ್, ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್ ಮತ್ತು ಆಗ್ರೋ ಇಂಡಸ್ಟ್ರೀಸ್ ಕಾರ್ಪೋರೇಷನ್ ಲಿಮಿಟೆಡ್‌ಗಳನ್ನು ಮುಚ್ಚುವಂತೆ ಶಿಾರಸು ಮಾಡಲಾಗಿದೆ.
ಇದಲ್ಲದೆ, ರಾಜ್ಯ ಏಡ್ಸ್ ತಡೆಗಟ್ಟುವ ಸೊಸೈಟಿ-ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೇಷ್ಮೆ ಕೈಗಾರಿಕೆ ನಿಗಮ- ರೇಷ್ಮೆ ಮಾರುಕಟ್ಟೆ ಮಂಡಳಿ ಲಿಮಿಟೆಡ್, ಆಹಾರ ಕರ್ನಾಟಕ ಲಿಮಿಟೆಡ್- ರಾಜ್ಯ ಕೃಷಿ ಉತ್ಪನ್ನ, ಸಂಸ್ಕರಣೆ ಮತ್ತು ರ್ತು ನಿಗಮ, ಬೆಂಗಳೂರು ಸಬ್ ಅರ್ಬನ್ ರೈಲ್ವೆ ಕಂಪನಿ ಲಿಮಿಟೆಡ್(ಬಿ-ರೈಡ್)- ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ ಲಿಮಿಟೆಡ್(ಕೆ-ರೈಡ್), ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ- ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಮೈಸೂರು ಕ್ರೋಮ್ ಟ್ಯಾನಿಂಗ್ ಕಂಪನಿ- ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮ- ರಾಜ್ಯ ಅರಣ್ಯ ಕೈಗಾರಿಕಾ ನಿಗಮ, ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ- ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (ಜಿಕೆವಿಕೆ), ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಸಿಎಡಿಎ) ಜತೆಗೆ ಸಂಬಂಧಿಸಿದ ನೀರಾವರಿ ನಿಗಮಗಳನ್ನು ವಿಲೀನ ಮಾಡಬೇಕು. ಇದಕ್ಕಾಗಿ ಆರು ತಿಂಗಳ ಒಳಗಾಗಿ ಏಕೀಕೃತ ಕ್ರಿಯಾ ಯೋಜನೆ ಸಿದ್ಧಪಡಿಸಬೇಕೆಂದು ಸಲಹೆ ನೀಡಲಾಗಿದೆ ಎಂದು ಆರ್.ವಿ.ದೇಶಪಾಂಡೆ ಮಾಹಿತಿ ನೀಡಿದರು.
ಸಾವಿರಕ್ಕೂ ಅಧಿಕ ನಿಷ್ಕ್ರಿಯ ಯೋಜನೆ
ಕರ್ನಾಟಕ ಏಕೀಕರಣದಿಂದ ಇಲ್ಲಿಯವರೆಗೂ ಆಯಾ ಕಾಲಘಟ್ಟದಲ್ಲಿ ವಿವಿಧ ಸರ್ಕಾರಗಳು ಜಾರಿಗೆ ತಂದಿರುವ 1 ಸಾವಿರಕ್ಕೂ ಅಧಿಕ ಯೋಜನೆಗಳು ನಿಷ್ಕ್ರಿಯವಾಗಿವೆ. ಹೊಸ ಸರ್ಕಾರ ರಚನೆಯಾದ ಮೇಲೆ ತಮಗೆ ಬೇಕಾದ ಯೋಜನೆ ೋಷಣೆ ಮಾಡುತ್ತವೆ. ಮತ್ತೊಂದು ಸರ್ಕಾರ ಬಂದಾಗ ಬಜೆಟ್‌ನಲ್ಲಿ ಅನುದಾನ ನೀಡುವುದಿಲ್ಲ. ಸಕ್ರಿಯವಾಗಿ ಇಟ್ಟುಕೊಳ್ಳಬೇಕೆಂದು 1 ಲಕ್ಷ ರೂ.ಮಾತ್ರ ನಿಗದಿ ಮಾಡಿ ಸುಮ್ಮನಾಗುತ್ತಾರೆ. ಇಂತಹ ನಿಷ್ಕ್ರಿಯ ಯೋಜನೆಗಳು ಹಾಗೂ ಅನವಶ್ಯಕ ಮತ್ತು ನಕಲಿ ಹುದ್ದೆಗಳ ಬಗ್ಗೆ 10ನೇ ವರದಿ ಸಿದ್ಧಪಡಿಸಲು ನಿರ್ಧಾರ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.
ಭೂ ಸ್ವಾಧೀನ ಸುಧಾರಣೆಗಳ ಶಿಫಾರಸು
-ಭೂ ಸ್ವಾಧೀನ ಸುಧಾರಣೆ ಕಾಯ್ದೆಗೆ 2013ರ ಅನುಗುಣವಾಗಿ ತಿದ್ದುಪಡಿ
-ಆರ್‌ಎ್ಸಿಟಿಎಲ್‌ಎಆರ್‌ಆರ್ ಕಾಯ್ದೆ-2013 ಅಳವಡಿಸುವುದು
-ಯೋಜನೆ ಭೂಸ್ವಾಧೀನ ಪೂರ್ಣವಾಗುವವರೆಗೂ ಎಸ್‌ಎಲ್‌ಎಒ ವರ್ಗಾವಣೆಗೆ ತಡೆ
-ಯೋಜನೆಯ ಗಾತ್ರ, ಅವಧಿಗೆ ಅನುಗುಣವಾಗಿ ಸಹಾಯಕ ಸಿಬ್ಬಂದಿ ಮಂಜೂರು
-ನೈಜ ಮಾಹಿತಿ ಸಂಗ್ರಹಿಸಲು, ನವೀಕೃತ ದಾಖಲೆ ಪಡೆಯಲು ಇ-ತಂತ್ರಾಂಶ ಸಂಯೋಜನೆ
-ಕಾಲಮಿತಿ, ಪರಿಹಾರ ಪಾವತಿ ಮೇಲ್ವಿಚಾರಣೆಗೆ ಒಂದೇ ಪೋರ್ಟಲ್ ಅಭಿವೃದ್ಧಿ
-ಸಯೋಜಿತ ಭೂ ನಿರ್ವಹಣಾ ವ್ಯವಸ್ಥೆ (ಯುಎಲ್‌ಎಂಎಸ್) ಅನುಷ್ಠಾನ ಅಗತ್ಯ
ಲೋಕೋಪಯೋಗಿ ಇಲಾಖೆ
-ಗುಣಮಟ್ಟ ಭರವಸೆ ವಿಭಾಗಕ್ಕೆ ತಾಂತ್ರಿಕ ಸಿಬ್ಬಂದಿ, ಗುಮಾಸ್ತ ನಿಯೋಜನೆ
-ತಾಂತ್ರಿಕ ತರಬೇತಿಗೆ ಪಿಡಬ್ಲ್ಯುಡಿ ತರಬೇತಿ ಸಂಸ್ಥೆ ಸ್ಥಾಪನೆ
-ಗುಣಮಟ್ಟ ಮೇಲ್ವಿಚಾರಣೆ ನಡೆಸಲು 500 ಇಂಜಿನಿಯರ್‌ಗಳ ನೇಮಕಾತಿ
-ಗ್ರಾಪಂ ಸೇರಿ 20 ಸರ್ಕಾರಿ ಕಚೇರಿಗಳ ಸಂಪರ್ಕ ಕಲ್ಪಿಸುವ ಕೆ-ಸ್ವಾನ್ 3.0 ಅನುಷ್ಠಾನ
-ರಾಜ್ಯ ದತ್ತಾಂಶ ಕೇಂದ್ರ ವಿಸ್ತರಿಸಿ, ಆಧುನೀಕರಿಸಲು 250 ಕೋಟಿ ರೂ. ಅಗತ್ಯವಿದೆ