ನ್ಯೂಸ್

ಜುಲೈ 15ರಿಂದ 26ರವರೆಗೆ ಅಧಿವೇಶನ

ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ವಿಧಾನ ಮಂಡಲ ಅಧಿವೇಶನ ಜುಲೈ 15ರಿಂದ ಆರಂಭವಾಗಲಿದ್ದು, 26ರವರೆಗೆ 9 ದಿನ ನಡೆಯುವುದು.

ಶಾಸನ ಸಭೆಯ ಸಂಪ್ರದಾಯದ ಪ್ರಕಾರ ಅಧಿವೇಶನ ಕರೆಯುವ ಬಗ್ಗೆ ಸಂಪುಟ ಸಭೆ ರಾಜಭವನಕ್ಕೆ ಪ್ರಸ್ತಾವನೆ ಕಳಿಸಿತ್ತು. ಮಂಗಳವಾರ ರಾಜ್ಯಪಾಲರು ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದು, ಅಧಿಕೃತವಾಗಿ ದಿನಾಂಕ ನಿಗದಿಯಾದಂತಾಗಿದೆ.

ಇತ್ತ ರಾಜಕೀಯ ಪಕ್ಷಗಳು ಅಧಿವೇಶನಕ್ಕೆ ತಯಾರಿ ಆರಂಭಿಸಿವೆ. ಪ್ರತಿಪಕ್ಷ ಬಿಜೆಪಿಯು ಅಧಿವೇಶನದಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳ ಕುರಿತು ದಾಖಲೆ ಸಂಗ್ರಹ ಆರಂಭಿಸಿದರೆ, ಸರ್ಕಾರ ಕೂಡ ಯಾವೆಲ್ಲ ವಿಚಾರ ಪ್ರಮುಖವಾಗಿ ಚರ್ಚೆಗೆ ಬರಬಹುದು ಹಾಗೂ ಅದಕ್ಕಾಗಿ ಯಾವ ರೀತಿ ಉತ್ತರ ಕೊಡಬೇಕೆಂದು ತಯಾರಿ ಮಾಡಿಕೊಳ್ಳಲಾರಂಭಿಸಿದೆ.