ನ್ಯೂಸ್

ಭಗವಂತನ ಸೇವೆ ಮಾಡಿ ಅವರ ಅನುಗ್ರಹ ಪಡೆಯಬೇಕು

ರಾಣೆಬೆನ್ನೂರ: ಪ್ರತಿಯೊಬ್ಬರೂ ಭಗವಂತನ ಸೇವೆ ಮಾಡಿ ಅವರ ಅನುಗ್ರಹ ಪಡೆದು ಧರ್ಮ ಕಾರ್ಯಕ್ಕೆ ದಾನ ಮಾಡಬೇಕು ಎಂದು ಲಿಂಗದಹಳ್ಳಿ ರಂಭಾಪುರಿ ಶಾಖಾಮಠದ ಡಾ. ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕರ್ನಾಟಕ ದೇವಸ್ಥಾನ ಮಠ ಮತ್ತು ಧಾಮಿರ್ಕ ಸಂಸ್ಥೆಗಳ ಮಹಾಸಂಘ ಹಾಗೂ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಗರದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ತಾಲೂಕು ಮಟ್ಟದ ಮಂದಿರ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.

ಸನಾತನ ಧರ್ಮ ಅತ್ಯಂತ ಪುರಾತನವಾದದ್ದು, ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪ್ರತಿಯೊಬ್ಬರೂ ಧರ್ಮ ಪಾಲನೆಯನ್ನು ಮಾಡಿ, ಧರ್ಮದ ಮಹತ್ವ, ಆಚರಣೆ ಇದೆಲ್ಲದರ ಬಗ್ಗೆ ತಿಳಿಯಬೇಕು. ದೇವರು ಮತ್ತು ಭಕ್ತರ ಮಧ್ಯೆ ದೇವಸ್ಥಾನಗಳು ಕೊಂಡಿಯಾಗಿ ಕೆಲಸ ಮಾಡುತ್ತವೆ. ಹೀಗಾಗಿ ದೇವಸ್ಥಾನದಲ್ಲಿ ಭಕ್ತರಿಗೆ ಎಲ್ಲ ರೀತಿಯ ಅನುಕೂಲ ಮಾಡುವುದು ದೇವಸ್ಥಾನ ವಿಶ್ವಸ್ಥರ ಕೆಲಸವಾಗಿದೆ ಎಂದರು.

ಹಿಂದು ಜನಜಾಗೃತಿ ಸಮಿತಿಯ ವಿಜಯ ರೇವಣಕರ ಮಾತನಾಡಿ, ದೇವಸ್ಥಾನಗಳ ನಿಧಿಯನ್ನು ಅನ್ಯಧಮಿರ್ಯರಿಗೆ ನೀಡುವುದು ಸರಿಯಲ್ಲ. ಸರ್ಕಾರೀಕರಣವಾದ ಮಂದಿರಗಳ ಜೀಣೋರ್ದ್ಧಾರಕ್ಕಾಗಿ ಸಹಾಯ ಮಾಡದೆ ಇತರ ಧಮಿರ್ಯರ ಪ್ರಾರ್ಥನಾ ಸ್ಥಳಕ್ಕೆ ನೀಡಲಾಗುತ್ತದೆ. ದೇವಸ್ಥಾನಗಳ ಜಮೀನನ್ನು ಕಬಳಿಸುವುದು, ಲೆಕ್ಕವನ್ನಿಡದಿರುವುದು, ಆಭರಣಗಳ ಕಳ್ಳತನ ಇವೆಲ್ಲವುಗಳ ವಿರುದ್ಧ ಮಹಾಸಂಘವು ಹೋರಾಟ ಮಾಡುತ್ತಿದೆ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ ಮಾತನಾಡಿ, ಇವತ್ತು ವಿದೇಶಿಯರು ಭಾರತೀಯ ಸಂಸತಿ ಮಹತ್ವವನ್ನು ತಿಳಿದುಕೊಂಡು ಅದನ್ನು ಪಾಲಿಸಲು ಪ್ರಾರಂಭ ಮಾಡಿದ್ದಾರೆ. ಹೆಚ್ಚಿನ ವಿಷಯ ತಿಳಿದುಕೊಳ್ಳಲು ಭಾರತಕ್ಕೆ ಬರುತ್ತಿದ್ದಾರೆ. ನಾವು ಅವರನ್ನು ನೋಡಿ ಕಲಿಯುವುದು ತುಂಬಾ ಇದೆ ಎಂದರು.

ವೀರಭದ್ರೇಶ್ವರ ದೇವಸ್ಥಾನದ ಉಪಾಧ್ಯಕ್ಷ ಸತೀಶ ಜಂಬಗಿ, ಕೃಷ್ಣಾಸಾ ಪವಾರ, ರಾಜು ಧರೆಯಣ್ಣವರ ಮತ್ತಿತರರು ಉಪಸ್ಥಿತರಿದ್ದರು.