ನ್ಯೂಸ್

ಪ್ರತಿ ಪ್ರೇಮಿಗಳ ದಿನದಂದು ಮಾಜಿ ಪ್ರೇಮಿಗಳಿಂದ 10 ಸಾವಿರ ಪೌಂಡ್​ ಗಿಫ್ಟ್​ ಪಡೆಯುವ ಮಾಡೆಲ್​: ಕಾರಣ ಕೇಳಿದ್ರೆ ಶಾಕ್​ ಖಂಡಿತ!

ಲಂಡನ್​: ಇಂಗ್ಲೆಂಡ್​ನ ಮಾಡೆಲ್​ ಒಬ್ಬಳು ತನ್ನ ಮಾಜಿ ಪ್ರೇಮಿಗಳಿಂದ ಪ್ರತಿ ವರ್ಷದ ಪ್ರೇಮಿಗಳ ದಿನಾಚರಣೆಯಂದು ಭಾರಿ ಉಡುಗೊರೆಯನ್ನು ಪಡೆದುಕೊಳ್ಳುತ್ತಾರಂತೆ.

ಹೌದು, ಹೇಲೇ ಲಿಯಾನ್ನಾ(37) ಎಂಬ ಕೇಂಬ್ರಿಡ್ಜ್‌ಶೈರ್​​ನ ಪೀಟರ್​ಬರೋ ಮೂಲದ ಮಾಡೆಲ್​ ಪ್ರತಿ ವರ್ಷದ ಪ್ರೇಮಿಗಳ ದಿನಾಚರಣೆಯಂದು ಮಾಜಿ ಪ್ರೇಮಿಗಳಿಂದ 10 ಸಾವಿರ ಪೌಂಡ್​(9,21,451 ರೂ.) ಅನ್ನು ಗಿಫ್ಟ್​ ರೂಪದಲ್ಲಿ ಪಡೆದುಕೊಳ್ಳುತ್ತಾರಂತೆ. ಅದಕ್ಕೆ "ಪಾಪಪ್ರಜ್ನೆ ಉಡುಗೊರೆ" ಎಂದು ಹೆಸರಿಸಲಾಗಿದ್ದು, ಪತ್ನಿಗಾಗಿ ಪ್ರೇಯಸಿಯನ್ನು ದೂರಮಾಡಿಕೊಂಡ ಅಪರಾಧ ಪ್ರಜ್ನೆಗೆ ದುಬಾರಿ ಉಡುಗೊರೆಯನ್ನು ಆಕೆಯ ಪ್ರೇಮಿಗಳು ನೀಡುತ್ತಿದ್ದಾರೆ ಎಂದು ಹೇಳಿದರೆ ನೀವು ನಂಬಲೇಬೇಕು.

ಚಿನ್ನಾಭರಣ, ಡಿಸೈನರ್​ ವಾಚ್​ಗಳು ಮತ್ತು ಮಾಜಿ ಪ್ರೇಮಿಗಳಿಂದ ಒಳ್ಳೆಯ ಸ್ಥಳಗಳಿಗೆ ಭೇಟಿಯಂತಹ ದುಬಾರಿ ಉಡುಗೊರೆಯನ್ನು ಲಿಯನ್ನಾ ಪ್ರತಿ ವರ್ಷ ಪಡೆದುಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ಡೇಟಿಂಗ್​ ಸೈಟ್​ ಮೂಲಕ ತನ್ನ ಮಾಜಿ ಪ್ರೇಮಿಗಳನ್ನು ಲಿಯಾನ್ನಾ ಸಂಪರ್ಕ ಮಾಡುತ್ತಾರೆ. ತನ್ನ ಪತ್ನಿಗಾಗಿ ಲಿಯನ್ನಾರನ್ನು ದೂರ ಮಾಡಿಕೊಂಡ ಅಪರಾಧ ಪ್ರಜ್ನೆಯಿಂದ ಮಾಜಿ ಪ್ರೇಮಿಗಳು ನೀಡುವ ಉಡುಗೊರೆಯನ್ನು ಲಿಯನ್ನಾ ಪಡೆದುಕೊಳ್ಳುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ತನ್ನ ಪ್ರೇಮಿಗಳ ಪಟ್ಟಿಯಲ್ಲಿರುವ ಓರ್ವ 3 ಸಾವಿರ ಪೌಂಡ್​ ಮೌಲ್ಯದ ಚಿನ್ನದ ಸರ ನೀಡಿದ್ದಾನೆ. ಬಿಜಿನೆಸ್​ ಮ್ಯಾನ್​, ವ್ಯಾಪಾರಿ ಹೀಗೆ ಮುಂತಾದವರು ಲಿಯನ್ನಾ ಪ್ರೇಮಿಗಳ ಪಟ್ಟಿಯಲ್ಲಿದ್ದು, ಪ್ರತಿ ವರ್ಷ ಉಡುಗೊರೆಯನ್ನು ನೀಡುತ್ತಾರೆ.

ಈ ಬಗ್ಗೆ ಮಾತನಾಡಿರುವ ಲಿಯನ್ನಾ ನಾನು ಒಳ್ಳೆಯ ಆಭರಣಗಳು ಹಾಗೂ ವಾಚ್​ಗಳನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದೇನೆ. ಅಲ್ಲದೆ, ಶ್ರೀಮಂತ ಪ್ರೇಮಿಗಳೊಬ್ಬರೊಂದಿಗೆ ಫೆಬ್ರವರಿಯಲ್ಲಿ ಡೇಟಿಂಗ್​ಗಾಗಿ ಒಳ್ಳೆಯ ಸ್ಥಳಗಳಿಗೆ ಹೋಗುತ್ತೇವೆ ಎಂದಿದ್ದಾರೆ. (ಏಜೆನ್ಸೀಸ್​)