ನ್ಯೂಸ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೊತೆ ಜೊತೆಯಲಿ ಸೀರಿಯಲ್​​ ನಟಿ!

ಬೆಂಗಳೂರು: ಕಿರುತೆರೆ ನಟಿ ಶಿಲ್ಪಾ ಅಯ್ಯರ್ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಮಾನ್ಸಿ ಪಾತ್ರದ ಮೂಲಕವಾಗಿ ಮನೆಮಾತಾಗಿದ್ದರು. ಶಿಲ್ಪಾ, ಸಚಿನ್ ವಿಶ್ವನಾಥ್ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಳೆದ ತಿಂಗಳಷ್ಟೇ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ನಟಿ ಶಿಲ್ಪಾ ಅಯ್ಯರ್, ವ್ಯಾಲೆಂಟೈನ್ಸ್ ಡೇ ದಿನ ವೀಡಿಯೋವನ್ನು ಶೇರ್ ಮಾಡಿ ಮದುವೆ ಆಗುತ್ತಿರುವುದಾಗಿ ಹೇಳಿಕೊಂಡಿದ್ದರು. ಇದೀಗ ನಟಿ ಶಿಲ್ಪಾ ಅಯ್ಯರ್ ಸೈಲೆಂಟ್ ಆಗಿ ಹಸೆಮಣೆ ಏರಿದ್ದಾರೆ.

ಸಚಿನ್ ವಿಶ್ವನಾಥ್ ಅವರು ಲಾಯರ್ ಆಗಿದ್ದು, ಮನೆಯವರೇ ನೋಡಿ ನಿಶ್ಚಯಿಸಿರುವ ಮದುವೆಯಾಗಿದೆ. ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿದ್ದಾರೆ. ಶಿಲ್ಪಾ ಸಚಿನ್ ವಿಶ್ವನಾಥ್ ಎಂಬುವರ ಜೊತೆ ನಟಿ ಶಿಲ್ಪಾ ಅಯ್ಯರ್ ಅವರು ದಾಂಪತ್ಯ ಜೀವನವನ್ನು ಪ್ರಾರಂಭಿಸಿದ್ದಾರೆ.

ಸ್ನೇಹಿತರೆಲ್ಲಾ ವಿಶ್ ಮಾಡಿರುವ ಫೋಟೋಗಳನ್ನು ಮಾತ್ರವೇ ಶಿಲ್ಪಾ ಅಯ್ಯರ್ ಸ್ಟೇಟಸ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನವಜೋಡಿಗೆ ಕಲಾವಿದರು, ಅಭಿಮಾನಿಗಳು ಶುಭಹಾರೈಸಿದ್ದಾರೆ.