ನ್ಯೂಸ್

ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವೃದ್ಧ; ಕೃತ್ಯ ಚಿತ್ರೀಕರಿಸಿದ ಮಗ

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ 68 ವರ್ಷದ ವ್ಯಕ್ತಿಯೋರ್ವ ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ಎಸಗಿ ಅದನ್ನು ಚಿತ್ರಿಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

ಘಟನೆ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಯ ಮಗ ಕೃತ್ಯದ ಮೊಬೈಲ್​ ಫೋನಿನಲ್ಲಿ ಚಿತ್ರೀಕರಿಸುವ ವಿಡಿಯೋವನ್ನು ಸಂತ್ರಸ್ತೆಯ ತಂದೆಗೆ ತೋರಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಯಾರು ಇಲ್ಲದ ವೇಳೆ ಕೃತ್ಯ

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಉತ್ತರ ದೆಹಲಿಯ ಡಿಸಿಪಿ ಸಾಗರ್​ ಕಳ್ಸಿ ಬಂಧಿತ ಆರೋಪಿಯೂ ಅಪ್ರಾಪ್ತ ವಯಸ್ಕಳ ಕುಟುಂಬಸ್ಥರಿಗೆ ಹಲವು ವರ್ಷಗಳಿಂದ ಪರಿಚಯವಿದ್ದು, ಅವರ ಜೊತೆ ಪ್ರವಾಸಕ್ಕೆ ಜೊತೆಯಾಗಿ ತೆರಳುತ್ತಿದ್ದ. ಎರಡು ಕುಟುಂಗಳ ನಡುವಿನ ಸಂಬಂಧವನ್ನೇ ಆರೋಪಿ ಬಂಡವಾಳ ಮಾಡಿಕೊಂಡು ಕೃತ್ಯ ಎಸಗಿದ್ದಾನೆ.

ಘಟನೆಯೂ ಏಪ್ರಿಲ್​ 20-30 ತಾರೀಖಿನ ಅವಧಿಯಲ್ಲಿ ನಡೆದಿದ್ದು, ಸಂತ್ರಸ್ತಳ ಮನೆಯಲ್ಲಿ ಯಾರು ಇಲ್ಲದೆ ಇರುವುದನ್ನು ಗಮನಿಸಿದ ಆರೋಪಿಯೂ ತನ್ನ ಮನೆಗೆ ಬರುವಂತೆ ಹೇಳಿ ಆಮಿಷವೊಡ್ಡಿದ್ಧಾನೆ. ಇದನ್ನು ನಂಬಿದ ಆಕೆ ಮನೆಯೊಳಗೆ ಪ್ರವೇಶಿಸಿದ ನಂತರ ಆರೋಪಿಯೂ ಆಕೆಯ ಮೇಲೆ ಅತ್ಯಾಚಾರ ಎಸಗಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ.

ಮೊಬೈಲ್​ ಫೋನಿನಲ್ಲಿ ಚಿತ್ರೀಕರಣ

ಆರೋಪಿಯ ಮಗ ತನ್ನ ತಂದೆ ಯಾರು ಇಲ್ಲದ ವೇಳೆ ಮಾಟ ಮಂತ್ರ ಮಾಡುತ್ತಿದ್ದಾರೆ ಎಂದು ಶಂಕಿಸಿ ಆತನ ರೂಮಿನಲ್ಲಿ ಕ್ಯಾಮರಾ ಇರಿಸಿದ್ದ. ಕೃತ್ಯವು ಸಂಪೂರ್ಣವಾಗಿ ಮೊಬೈಲ್​ ಫೋನಿನಲ್ಲಿ ಸೆರೆಯಾಗಿದ್ದು, ಆರೋಪಿಯ ಮಗ ಪರಿಶೀಲಿಸಿದಾಗ ಸಂಪೂರ್ಣ ವಿಚಾರ ಬೆಳಕಿಗೆ ಬಂದಿದೆ. ಇದನ್ನು ಸಂತ್ರಸ್ತೆಯ ತಂದೆಗೆ ಕಳುಹಿಸಿದಾಗ ಅವರು ದೂರು ದಾಖಲಿಸಿದ್ದಾರೆ.

ಅತ್ಯಾಚಾರ ಪ್ರಕರಣ ಸಂಬಂಧ ಆರೋಪಿ ಹಾಗೂ ಆತನ ಮಗನನ್ನು ವಶಕ್ಕೆ ಪಡೆಯಲಾಗಿದ್ದು, ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಅಪ್ರಾಪ್ತ ವಯಸ್ಕಳ ಜೊತೆ ಆಪ್ತ ಸಮಾಲೋಚನೆ ನಡೆಸಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಬಂಧಿತರ ವಿರುದ್ಧ ಭಾರತ ದಂಡ ಸಂಹಿತೆ(IPC Section) 354, 376, 504, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮೊಬೈಲ್​ ಫೋನ್​ ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನು ವಕ್ಕೆ ಪಡೆಯಲಾಗಿದೆ ಎಂದು ಉತ್ತರ ದೆಹಲಿಯ ಡಿಸಿಪಿ ಸಾಗರ್​ ಕಳ್ಸಿ ತಿಳಿಸಿದ್ದಾರೆ.