ನ್ಯೂಸ್

ವಾದಕ್ಕಿಳಿದವನಿಗೆ ಅರೆಬೆತ್ತಲೆ ಶಿಕ್ಷೆ!

ವಿಜಯಪುರ: ಅನಗತ್ಯವಾಗಿ ವಾದಕ್ಕಿಳಿದ ವ್ಯಕ್ತಿಯೊಬ್ಬನಿಗೆ ಬಟ್ಟೆ ಬಿಚ್ಚಿಸಿದ ಪೊಲೀಸರು ಜೀಪಿನಲ್ಲಿ ಕೂರುವ ಶಿಕ್ಷೆ ಕೊಟ್ಟ ಘಟನೆ ಶನಿವಾರ ಮುದ್ದೇಬಿಹಾಳ ತಾಲೂಕಿನಲ್ಲಿ ನಡೆದಿದೆ.

ರಕ್ಕಸಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್​ಎಸ್ಎಲ್​ಸಿ ಪರೀಕ್ಷೆ ಕಾರ್ಯದ ಭದ್ರತೆ ಪರಿಶೀಲನೆಗೆಂದು ಪಿಎಸೈ ಮಲ್ಲಪ್ಪ ಮಡ್ಡಿ ಹಾಗೂ ಪೇದೆಗಳು ತೆರಳಿದ್ದರು‌. ಈ ವೇಳೆ ಪರೀಕ್ಷಾ ಕೇಂದ್ರದ ಸುತ್ತಮುತ್ತ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಅಲ್ಲಿಂದ ತೆರಳುವಂತೆ ಸೂಚಿಸಿದರೂ ಕ್ಯಾರೆ ಎನ್ನದೆ ಸುಮ್ಮನಿದ್ದ. ಇದನ್ನು ಪ್ರಶ್ನಿಸಿದ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಆತ, ಬಾಯಿಗೆ ಬಂದಂತೆ ಮಾತನಾಡಿದ್ದಾನೆ. ಇದನ್ನೂ ಓದಿರಿ ಕ್ವಾರಂಟೈನ್​ನಲ್ಲಿರೋ ಸಚಿವರಿಗೆ ಕೋವಿಡ್​ ಆಸ್ಪತ್ರೆಯಿಂದ ತಡರಾತ್ರಿ ಬಂತೊಂದು ಉಡುಗೊರೆ!

ಪರೀಕ್ಷಾ ಕೇಂದ್ರ ಬಳಿ ಓಡಾಡುತ್ತಿದ್ದ ವ್ಯಕ್ತಿ ಪೊಲೀಸರಿಗೆ ನಿಂದಿಸಿದ್ದಾನೆ ಎನ್ನಲಾಗಿದೆ. ಹಾಗಾಗಿ ಆತನನ್ನು ವಶಕ್ಕೆ ಪಡೆದ ಪೊಲೀಸರು ಜೀಪಿನಲ್ಲಿ ಬಟ್ಟೆ ಬಿಚ್ಚಿಸಿ ಕೂರಿಸಿದ್ದಾರೆ‌. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.