ರಾಣೆಬೆನ್ನೂರ: ವಿದ್ಯಾರ್ಥಿನಿಯರು ತರಬೇತಿಯಲ್ಲಿ ಕಲಿತುಕೊಂಡ ವಿದ್ಯೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನಕ್ಕೆ ಮಾರ್ಗ ಕಂಡುಕೊಳ್ಳಬೇಕು ಎಂದು ಪ್ರಾಚಾರ್ಯ ನಾರಾಯಣ ನಾಯಕ ಹೇಳಿದರು.
ಇಲ್ಲಿಯ ಬ್ಯಾಂಕ್ ಆಫ್ ಬರೋಡಾ ಮತ್ತು ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ನಗರದ ಕೆಎಲ್‌ಇ ಸಂಸ್ಥೆಯ ರಾಜ ರಾಜೇಶ್ವರಿ ಮಹಾವಿದ್ಯಾಲಯದಲ್ಲಿ 7 ದಿನಗಳ ಕಾಲ ನಡೆದ ಸೌಂದರ್ಯವರ್ದಕ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಉಪನ್ಯಾಸಕರಾದ ಅನುರಾಧ ಎಸ್., ಎಂ.ಎನ್. ಸೂರಣಗಿ, ಸಾಯಿಲತಾ ಮಡಿವಾಳರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪ್ರೇಮಾ ನಾಯಕ ಸ್ವಾಗತಿಸಿದರು. ಸಂಗೀತಾ ಕಾಯಕದ ಪ್ರಾರ್ಥಿಸಿದರು. ಕಾವ್ಯ ಲಮಾಣಿ ನಿರೂಪಿಸಿದರು. ಅರ್ಚನಾ ಹರಿಹರ ವಂದಿಸಿದರು.