ನ್ಯೂಸ್

ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಸೆ. 15ರಂದು

ರಾಣೆಬೆನ್ನೂರ: ಶ್ರಾವಣ ಮಾಸದ ಅಂಗವಾಗಿ ಜೆಸಿಐ ಘಟಕ ಹಾಗೂ ರಾಣೆಬೆನ್ನೂರ ರಕ್ತನಿಧಿ ಕೇಂದ್ರ ಸಹಯೋಗದಲ್ಲಿ ಸೆ. 15ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 3.30ರವರೆಗೆ ಇಲ್ಲಿಯ ರಂಗನಾಥ ನಗರದ ಸದ್ಗುರು ರಂಗನಾಥ ಸ್ವಾಮಿ ಮಠದಲ್ಲಿ ರಕ್ತದಾನ ಮತ್ತು ಉಚಿತ ರಕ್ತ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ ಎಂದು ಜೆಸಿಐ ಘಟಕದ ತಾಲೂಕು ಅಧ್ಯಕ್ಷೆ ಲಕ್ಷ್ಮೀ ಅಡಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.