ಶಿವಮೊಗ್ಗ ಜಿಲ್ಲಾ ಸ್ವೀಪ್ ಸಮಿತಿಯಿಂದ ಚುನಾವಣಾ ರಾಯಭಾರಿಗಳಾಗಿ ಆಯ್ಕೆಯಾದವರಿಗೆ ಡಿಸಿ ಗುರುದತ್ತ ಹೆಗಡೆ ಪ್ರಮಾಣ ಪತ್ರ ವಿತರಿಸಿದರು. ಸ್ನೇಹಲ್ ಲೋಖಂಡೆ, ಜಿ.ಕೆ.ಮಿಥುನ್‌ಕುಮಾರ್, ದೀಕ್ಷಿತ್, ಜ್ಯೋತಿ, ಡಾ. ಕೆ.ಎಸ್.ಶುಭ್ರತಾ, ನಿವೇದನ್ ನೇಂಪೆ, ನಾಗರಾಜ್ ತೊಂಬ್ರಿ ಹಾಜರಿದ್ದರು. 
ನ್ಯೂಸ್

ಶಿವಮೊಗ್ಗ ಜಿಲ್ಲಾ ಚುನಾವಣಾ ರಾಯಭಾರಿಗಳ ಆಯ್ಕೆ

ಶಿವಮೊಗ್ಗ: ಮತದಾನ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಚುನಾವಣಾ ರಾಯಭಾರಿಗಳನ್ನು ಗುರುತಿಸಿದ್ದು, ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಶುಕ್ರವಾರ ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರು ರಾಯಭಾರಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ದೀಕ್ಷಿತ್, ಜ್ಯೋತಿ, ಡಾ. ಕೆ.ಎಸ್.ಶುಭ್ರತಾ, ನಿವೇದನ್ ನೇಂಪೆ, ನಾಗರಾಜ್ ತೊಂಬ್ರಿ ಅವರನ್ನು ರಾಯಭಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಪ್ರಮಾಣ ಪತ್ರ ವಿತರಿಸುವ ಸಮಯದಲ್ಲಿ ಸ್ವೀಪ್ ಸಮಿತಿ ಅಧ್ಯಕ್ಷ ಸ್ನೇಹಲ್ ಲೋಖಂಡೆ, ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್ ಹಾಜರಿದ್ದರು.
ದೀಕ್ಷಿತ್ ಪಿಡಬ್ಲೂೃ(ಅಂಧ) ಮತದಾರ. 2021ರಲ್ಲಿ ಕುವೆಂಪು ವಿವಿ ಇಂಗ್ಲೀಷ್ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಸ್ವರ್ಣ ಪದಕ ಪಡೆದಿದ್ದಾರೆ. ಈಗ ಸಂಶೋಧನೆಯಲ್ಲಿ ತೊಡಗಿದ್ದಾರೆ.
ಜ್ಯೋತಿ ಅಂತರರಾಷ್ಟ್ರೀಯ ಥ್ರೋಬಾಲ್ ಕ್ರೀಡಾಪಟು. 2022ರಲ್ಲಿ ರಾಜ್ಯ ಪ್ರಶಸ್ತಿ, 2024ರಲ್ಲಿ ಕ್ರೀಡಾ ರತ್ನ ಪ್ರಶಸ್ತಿ ಲಭಿಸಿದೆ.
ಡಾ. ಕೆ.ಎಸ್.ಶುಭ್ರತಾ ಮನೋವೈದ್ಯೆ ಮತ್ತು ಲೇಖಕಿ. ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸೈಕ್ರಿಯಾಟಿಸ್ಟ್ ನೀಡುವ ಓವರ್‌ಸೀಸ್ ಪ್ರಶಸ್ತಿ ಪಡೆದಿದ್ದಾರೆ.
ನಿವೇದನ್ ನೆಂಪೆ ಯುವ ಉದ್ಯಮಿ. ಅಡಕೆಯ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿದ್ದಾರೆ. ಮೇಕ್‌ಇನ್ ಇಂಡಿಯಾ ಎಕ್ಸಲೆನ್ಸ್ ಅವಾರ್ಡ್, ಇನ್ನೋವೇಟಿವ್ ಪ್ರಾಡಕ್ಟ್ ಆಫ್ ದಿ ಇಯರ್, ಚೇಂಬರ್ ಆಫ್ ಕಾಮರ್ಸ್ ಬಿಜಿನೆಸ್ ಅವಾರ್ಡ್ ಪಡೆದಿದ್ದಾರೆ.
ನಾಗರಾಜ್ ತೊಂಬ್ರಿ ಜೋಗಿ ಜಾನಪದ ಕಲಾವಿದರು. ಹೃದಯವಾಹಿನಿ ದಶಮಾನೋತ್ಸವ ಪ್ರಶಸ್ತಿ, ಕರಾವಳಿ ರಾಜ್ಯಮಟ್ಟದ ಪ್ರಶಸ್ತಿ, ಕಾಯಕಶ್ರೀ ಪ್ರಶಸ್ತಿ ಲಭಿಸಿದೆ.