ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಪಟ್ಟೆಮನೆ ಉದಯಕುಮಾರ್ ಅವರನ್ನು ಅಧ್ಯಕ್ಷ ಜೆರ್ಮಿ ಡಿಸೋಜ ಹಾಗೂ ನಿರ್ದೇಶಕರು ಅಭಿನಂದಿಸಿದರು. 
ನ್ಯೂಸ್

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ

ಸುಂಟಿಕೊಪ್ಪ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ಪಟ್ಟೆಮನೆ ಉದಯಕುಮಾರ್ ಅವಿರೋಧವಾಗಿ ಆಯ್ಕೆಯಾದರು.

ಬ್ಯಾಂಕಿನ ಸಭಾಗಂಣದಲ್ಲಿ ಇತ್ತೀಚೆಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲಾ ಸಹಕಾರ ಅಭಿವೃದ್ಧಿ ಅಧಿಕಾರಿ ಮೋಹನ್ ಪಿ.ಬಿ. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ, ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಪಟ್ಟೆಮನೆ ಉದಯಕುಮಾರ್ ಅವರನ್ನು ಆಯ್ಕೆಗೊಳಿಸಿದರು.

ಅಧ್ಯಕ್ಷ ಜೆರ್ಮಿ ಡಿಸೋಜ, ಸದಸ್ಯರಾದ ಎಂ.ಎನ್.ಕೊಮಾರಪ್ಪ, ಕುಂಜಿಲನ ಎಸ್.ಮಂಜುನಾಥ್, ಎನ್.ಸಿ.ಪೊನ್ನಪ್ಪ, ಡಿ.ಬಿ.ರಮೇಶ್ ಚಂಗಪ್ಪ, ಡಿ.ಕೆ.ಗಂಗಾಧರ, ಡಾ.ಶಶಿಕಾಂತ ರೈ, ಕೆ.ಪಿ.ಜಗನ್ನಾಥ್, ಕೆ.ಆರ್.ಮಂಜುನಾಥ, ಬಿ.ಕೆ.ದಯಾನಂದ, ಪಿ.ಪಿ.ಲೀಲಾವತಿ, ರಮ್ಯಾ ಮೋಹನ್ ಮತ್ತು ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಮಿತ್ರಾ ಇದ್ದರು.