ನ್ಯೂಸ್

ಹೆಣ್ಣು ಮಗುವಿನ ತಾಯಿಯಾದ ಅಕ್ರಮವಾಗಿ ಭಾರತಕ್ಕೆ ಬಂದ ಸೀಮಾ ಹೈದರ್! ಸಚಿನ್ ಮೀನಾ ಮನೆಯಲ್ಲಿ ಸಂಭ್ರಮ Seema Haider Gave Birth To A Baby Girl

Seema Haider Gave Birth To A Baby Girl :  ಪ್ರಿಯಕರ ಸಚಿನ್ ಮೀನಾಗಾಗಿ ಪಾಕಿಸ್ತಾನದಿಂದ  ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಸೀಮಾ ಹೈದರ್  ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್ ಅವರಿಗೆ ಮಂಗಳವಾರ ಬೆಳಿಗ್ಗೆ ಸೀಮಾ ಅವರಿಗೆ ಸೋಮವಾರ ಹೆರಿಗೆ ನೋವು ಕಾಣಿಸಿಕೊಂಡಿತು. ನಂತರ ಸಚಿನ್ ಮತ್ತು ಅವರ ಕುಟುಂಬ ಅವರನ್ನು ಗ್ರೇಟರ್ ನೋಯ್ಡಾದ ಕೃಷ್ಣ ಆಸ್ಪತ್ರೆಗೆ ಕರೆದೊಯ್ದರು. ಗ್ರೇಟರ್ ನೋಯ್ಡಾದ ಕೃಷ್ಣ ಆಸ್ಪತ್ರೆಯಲ್ಲಿ ಸೀಮಾ ಬೆಳಿಗ್ಗೆ 4 ಗಂಟೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ನವಜಾತ ಶಿಶು ಇಬ್ಬರೂ ಆರೋಗ್ಯವಾಗಿದ್ದಾರೆ. ಸೀಮಾ ಅವರಿಗೆ ಮೊದಲ ಪತಿಯಿಂದ ನಾಲ್ಕು ಮಕ್ಕಳಿದ್ದಾರೆ. ಈ ವೇಳೆ ಸೀಮಾ  ಐದನೇ ಮಗುವಿಗೆ ಜನ್ಮ ನೀಡಿದ್ದಾರೆ.  ಈ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿದೆ.

ಸೀಮಾ ಹೈದರ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಅವರು ೨೦೨೩ ರಲ್ಲಿ ಪಾಕಿಸ್ತಾನದಿಂದ ನೇಪಾಳ ಮೂಲಕ ಭಾರತಕ್ಕೆ ತಮ್ಮ ಪ್ರೀತಿಗಾಗಿ ಬಂದರು. PUBG ಆಡುವಾಗ ಸಚಿನ್ ಮೀನಾ ಅವರನ್ನು ಪ್ರೀತಿಸಿದ ಸೀಮಾ ಹೈದರ್ ಭಾರತಕ್ಕೆ ಬಂದು ಸಚಿನ್ ಅವರನ್ನು ಮದುವೆಯಾದರು. ಅಂದಿನಿಂದ ಅವರು ತಮ್ಮ ಪತಿ ಸಚಿನ್ ಅವರೊಂದಿಗೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ವಾಸಿಸುತ್ತಿದ್ದರು. ಅವರಿಬ್ಬರ ಪ್ರೇಮಕಥೆ ಇಡೀ ದೇಶದಲ್ಲಿ ಚರ್ಚೆಯ ವಿಷಯವಾಯಿತು.

ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಸೀಮಾ, ಗ್ರೇಟರ್ ನೋಯ್ಡಾದ ರಬುಪುರ ಗ್ರಾಮದಲ್ಲಿ ತನ್ನ ಪ್ರೇಮಿ ಸಚಿನ್ ಮೀನಾ ಜೊತೆ ವಾಸಿಸುತ್ತಿದ್ದಳು. ಸೀಮಾಳ ಮೊದಲ ಪತಿಯಿಂದ ಬಂದ ನಾಲ್ವರು ಮಕ್ಕಳೂ ಸಹ ಅವಳೊಂದಿಗೆ ವಾಸಿಸುತ್ತಿದ್ದಾರೆ.

ಅಕ್ರಮವಾಗಿ ಭಾರತಕ್ಕೆ ಬಂದಿದ್ದಕ್ಕಾಗಿ ಜುಲೈನಲ್ಲಿ ಬಂಧನಕ್ಕೊಳಗಾಗಿದ್ದ ಸೀಮಾ ಸದ್ಯ ಜಾಮೀನಿನ ಮೇಲೆ ಇದ್ದಾರೆ. ಆತನನ್ನು ಇನ್ನೂ ಪೊಲೀಸ್ ವಿಚಾರಣೆ ನಡೆಸಲಾಗುತ್ತಿದೆ. ಮತ್ತೊಂದೆಡೆ, ಅವರು ಭಾರತೀಯ ಪೌರತ್ವಕ್ಕಾಗಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ.