ನ್ಯೂಸ್

ಬನಸ್ಕಾಂತ ಬಳಿ ಭಾರತ-ಪಾಕ್​​ ಗಡಿ ದಾಟಲು ಯತ್ನಿಸಿದ ನುಸುಳುಕೋರನನ್ನು ಹತ್ಯೆಗೈದ ಭದ್ರತಾ ಪಡೆ | Gujarat

Gujarat: ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿ ಶುಕ್ರವಾರ (ಮೇ.23) ರಾತ್ರಿ ಭಾರತ-ಪಾಕ್​​ ಗಡಿ ದಾಟಿ ಒಳನುಸುಳಲು ಯತ್ನಿಸಿದ ನುಸುಳುಕೋರನನ್ನು ಗಡಿ ಭದ್ರತಾ ಪಡೆಗಳು (ಬಿಎಸ್‌ಎಫ್) ಹೊಡೆದುರುಳಿಸಿದ್ದಾರೆ.

ಅಂತರರಾಷ್ಟ್ರೀಯ ಗಡಿಯನ್ನು ದಾಟಿದ ನಂತರ ಗಡಿ ಬೇಲಿಯ ಕಡೆಗೆ ಒಬ್ಬ ಅನುಮಾನಾಸ್ಪದ ವ್ಯಕ್ತಿ ಬರುತ್ತಿರುವುದನ್ನು ಭದ್ರತಾ ಪಡೆಗಳು ಗಮನಿಸಿ, ಕ್ಷಿಪ್ರ ಕ್ರಮ ಕೈಗೊಂಡ ಬಿಎಸ್‌ಎಫ್ ಪಡೆಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನವು ಗಡಿಯಾಚೆಯಿಂದ ಶೆಲ್ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘನೆ ಮಾಡಿದ ನಂತರ ಭದ್ರತಾ ಪಡೆಗಳು ಕಟ್ಟೆಚ್ಚರದಲ್ಲಿವೆ.(ಏಜೆನ್ಸೀಸ್​)