ಬಿಹಾರದಲ್ಲಿ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಅಡಗಿಸಿದ್ದ ಮದ್ಯ ಪತ್ತೆ 
ನ್ಯೂಸ್

ಗ್ಯಾಸ್ ಸಿಲಿಂಡರ್‌ನಲ್ಲಿ ಮದ್ಯದ ‘ಸೀಕ್ರೆಟ್ ಚೇಂಬರ್’; ಖತರ್ನಾಕ್ ಐಡಿಯಾಗೆ ಪೊಲೀಸರೇ ಶಾಕ್! | Bihar Liquor Smuggling

ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಎಲ್‌ಪಿಜಿ ಸಿಲಿಂಡರ್‌ನೊಳಗೆ ರಹಸ್ಯವಾಗಿ ಮದ್ಯ ಅಡಗಿಸಿ ಸಾಗಿಸುತ್ತಿದ್ದ ವಿಚಾರ ತಪಾಸಣೆ ವೇಳೆ ಬಯಲಾಗಿದೆ.

LPG Cylinder Liquor Smuggling: ಮದ್ಯ ನಿಷೇಧ ಜಾರಿಯಲ್ಲಿರುವ ಬಿಹಾರದಲ್ಲಿ ಅಕ್ರಮ ಮದ್ಯ ಸಾಗಣೆಯ ಹೊಸ ತಂತ್ರವೊಂದು ಬಯಲಾಗಿದೆ. ಎಲ್‌ಪಿಜಿ ಸಿಲಿಂಡರ್‌ನೊಳಗೆ ರಹಸ್ಯ ಜಾಗ ಮಾಡಿಕೊಂಡು ಮದ್ಯ ಸಾಗಿಸುತ್ತಿದ್ದ ಪ್ರಕರಣವನ್ನು ಅಬಕಾರಿ ಇಲಾಖೆ ಹಾಗೂ ಪೊಲೀಸರು ಪತ್ತೆಹಚ್ಚಿದ್ದಾರೆ.

ಸಿಲಿಂಡರ್ ನೋಡಿ ಪೊಲೀಸರಿಗೆ ಅನುಮಾನ

ಗೋಪಾಲ್‌ಗಂಜ್‌ನಲ್ಲಿ ತಪಾಸಣೆ ನಡೆಸುತ್ತಿದ್ದ ಪೊಲೀಸರು ಬೈಕ್‌ನಲ್ಲಿ ಸಿಲಿಂಡರ್ ಸಾಗಿಸುತ್ತಿದ್ದ ವ್ಯಕ್ತಿಯನ್ನು ತಡೆದು ಪರಿಶೀಲಿಸಿದ್ದಾರೆ. ನೋಡಲು ಸಿಲಿಂಡರ್ ಸಾಮಾನ್ಯವಾಗಿಯೇ ಕಂಡರೂ, ಅದರ ತೂಕ ಹಾಗೂ ಬೈಕ್ ಸವಾರನ ವರ್ತನೆ ಪೊಲೀಸರಿಗೆ ಅನುಮಾನ ಮೂಡಿಸಿದೆ.

ಪರಿಶೀಲನೆ ವೇಳೆ ಬಯಲಾಯ್ತು ಗೋಲ್‌ಮಾಲ್

ಅನುಮಾನಗೊಂಡ ಪೊಲೀಸರು ಸಿಲಿಂಡರ್‌ನ್ನು ಪರಿಶೀಲಿಸಿದಾಗ ಅದರ ತಳಭಾಗದಲ್ಲಿ ಬದಲಾವಣೆ ಮಾಡಿರುವುದು ಪತ್ತೆಯಾಗಿದೆ. ಸಿಲಿಂಡರ್ ಒಳಗೆ ರಹಸ್ಯ ಜಾಗ ಮಾಡಿಕೊಂಡು ಮದ್ಯದ ಬಾಟಲಿ ಹಾಗೂ ಪೌಚ್‌ಗಳನ್ನು ಅಡಗಿಸಿಟ್ಟಿರುವುದು ಬೆಳಕಿಗೆ ಬಂದಿದೆ.

ಬಳಿಕ ಪೊಲೀಸರು ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿ ಮದ್ಯವನ್ನು ವಶಕ್ಕೆ ಪಡೆದು, ಬೈಕ್ ಸವಾರನನ್ನು ಬಂಧಿಸಿದ್ದಾರೆ. ಈ ರೀತಿಯಲ್ಲಿ ಅಕ್ರಮ ಮದ್ಯ ಸಾಗಿಸುತ್ತಿದ್ದ ಪ್ರಕರಣ ಅಧಿಕಾರಿಗಳಿಗೂ ಅಚ್ಚರಿ ಮೂಡಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಈ ಕಾರ್ಯಾಚರಣೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮದ್ಯ ಸಾಗಿಸಲು ಬಳಸಿದ ವಿಭಿನ್ನ ತಂತ್ರದ ಬಗ್ಗೆ ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ. ಸಿಲಿಂಡರ್‌ನಲ್ಲೇ ಮದ್ಯ ಅಡಗಿಸಿ ಸಾಗಿಸಿರುವುದಕ್ಕೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ತೆಲಂಗಾಣ ಯುವತಿಗೆ ದುರಂತ ಅಂತ್ಯ: ಮೃತದೇಹ ತರಲು ಸರ್ಕಾರದ ನೆರವು ಕೋರಿದ ಕುಟುಂಬ | Telangana Woman Dies in US

ಬಿಹಾರದಲ್ಲಿ ಮದ್ಯ ನಿಷೇಧ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಸಾಗಣೆ ತಡೆಯಲು ಪೊಲೀಸರು ಹಾಗೂ ಅಬಕಾರಿ ಇಲಾಖೆ ತಪಾಸಣೆಯನ್ನು ಮುಂದುವರಿಸಿದ್ದಾರೆ.