ಹುಣಸೂರು: ದುಶ್ಚಟಗಳಿಂದ ದೂರವಿದ್ದರೆ ಜೀವನ ಸುಖಮಯ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಹೇಳಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಳಿಕೆರೆ ವಲಯದ ಕೊಮ್ಮೆಗೌಡನ ಕೊಪ್ಪಲು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ನವ ಜೀವನೋತ್ಸವ ಮತ್ತು ಸಾಧನಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ದುಶ್ಚಟಗಳು ವ್ಯಕ್ತಿಯ ಮತ್ತು ಕುಟುಂಬದ ಶಾಂತಿಯನ್ನು ಹಾಳು ಮಾಡುತ್ತದೆ. ಮದ್ಯಪಾನ, ಧೂಮಪಾನ ಇನ್ನಿತರ ವ್ಯಸನಕ್ಕೆ ಒಳಗಾದವರು ಕುಟುಂಬ ಜೀವನ ಕಳೆದು ಕೊಳ್ಳುತ್ತಾರೆ. ಇದು ಸಮಾಜಕ್ಕೂ ಶಾಪವಾಗಿ ಪರಿಣಮಿಸುತ್ತದೆ ಎಂದರು.ಗ್ರಾ.ಪಂ.ಅಧ್ಯಕ್ಷೆ ಶ್ರುತಿ, ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಹಂದನಹಳ್ಳಿ ಸೋಮಶೇಖರ್, ಸದಸ್ಯ ಬಿಳಿಕೆರೆ ಪ್ರಸನ್ನ, ಕೆಎಂಎಫ್ ನಿರ್ದೇಶಕ ಕೆ.ಎಸ್. ಕುಮಾರ್, ಮುಖಂಡರಾದ ವೆಂಕಟೇಶ ಗೌಡ, ಧನಂಜಯ್, ಮಾಧವ ನಾಯಕ್, ವಸಂತ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರುತಿ, ಬೋಳನಹಳ್ಳಿ ಮೇಲ್ವಿಚಾರಕ ಕಿರಣ್, ಬಿಳಿಕೆರೆ ವಲಯದ ಮೇಲ್ವಿಚಾರಕಿ ವೀಣಾ ಮತ್ತು ಸೇವಾಪ್ರತಿನಿಧಿಗಳಾದ ಪದ್ಮಾ, ಕುಮಾರಿ, ಪಂಕಜಾ ಹಾಜರಿದ್ದರು.