ರಾಣೆಬೆನ್ನೂರ: ರಾಷ್ಟ್ರೀಯ ಹೊಸ ಶಿಕ್ಷಣ ನೀತಿ (ಎನ್ಇಪಿ) ಜಾರಿಯಾದ ದಿನದಿಂದ ಈವರೆಗೂ ಪದವಿ ಮತ್ತು ಸ್ನಾತಕೋತ್ತರ ವಿದ್ಯಾಥಿರ್ಗಳ ಅಂಕಪಟ್ಟಿ ವಿತರಣೆ ಮಾಡದೆ ವಿಳಂಬ ಮಾಡಲಾಗುತ್ತಿದೆ ಎಂದು ಆರೊಪಿಸಿ ಭಾರತ ವಿದ್ಯಾಥಿರ್ ಫೆಡರೇಷನ್ (ಎಸ್ಎಫ್ಐ) ತಾಲೂಕು ಟಕದ ವತಿಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಎದುರು ವಿದ್ಯಾಥಿರ್ಗಳು ಗುರುವಾರ ಪ್ರತಿಭಟನೆ ನಡೆಸಿದರು.
ಸಂಟನೆಯ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ರಾಜ್ಯದಲ್ಲಿ ಎನ್ಇಪಿ ಜಾರಿಯಾದ ನಂತರ 22ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು 51 ಲಕ್ಷಕ್ಕೂ ಹೆಚ್ಚು ವಿದ್ಯಾಥಿರ್ಗಳ ಅಂಕಪಟ್ಟಿ ವಿತರಣೆ ಮಾಡಿಲ್ಲ. ಇದರಿಂದ ವಿದ್ಯಾಥಿರ್ಗಳ ಮುಂದಿನ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆ ಉಂಟಾಗಿದೆ.
ಉನ್ನತ ವಿದ್ಯಾಭ್ಯಾಸಕ್ಕೆ ಹೋಗುತ್ತಿರುವ ವಿದ್ಯಾಥಿರ್ಗಳಿಗೆ ಈ ಸಮಸ್ಯೆ ಬಹಳಷ್ಟು ತೊಂದರೆ ನೀಡಿದೆ. ವಿದ್ಯಾಥಿರ್ಗಳು ವಿದ್ಯಾಥಿರ್ ವೇತನಕ್ಕೆ ಅಜಿರ್ ಸಲ್ಲಿಸಲು ಮತ್ತು ವಿದ್ಯಾಥಿರ್ ನಿಲಯಗಳಿಗೆ ಅಜಿರ್ ಸಲ್ಲಿಸಲು ಸಹ ತೊಂದರೆ ಆಗಿದೆ. ಆದ್ದರಿಂದ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಂಡು ಅಂಕಪಟ್ಟಿ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಾಂಶುಪಾಲ ರವಿಕುಮಾರ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಗೌತಮ ಸಾವಕ್ಕನವರ, ವಿದ್ಯಾ ರಾಣೆಬೆನ್ನೂರ, ಮಹೇಶ ಮರೋಳ, ಬಸವರಾಜ ಕೊಣಸಾಲಿ, ನೇಹಾಲಖಾನ್ ಗಂಗಾವತಿ, ಕೃಷ್ಣ ನಾಯಕ, ನವೀನ ಕಟ್ಟಣ್ಣನವರ, ಅನಿಲ ತೆರದಹಳ್ಳಿ, ಸುರೇಶ ಲಮಾಣಿ, ಚಂದ್ರು ಕೆ., ವಿಕಾಸಕುಮಾರ ಎಚ್.ಡಿ., ಶಶಿ ಎಣ್ಣಿಯವರ, ಮನೋಜ್ ಎಸ್., ವೀರೇಶ ಚಿಕ್ಕೇರೂರು, ವಿಕಾಸ ಕಾಯಕದ, ಭವ್ಯ ಡಿ.ಆರ್., ಲಕ್ಷಿ$್ಮ ನಡುವಿನಮನಿ ಮತ್ತಿತರರು ಪಾಲ್ಗೊಂಡಿದ್ದರು.