ಮಂಗಳೂರು: ಮೀನುಗಾರಿಕಾ ದಕ್ಕೆಗೆ ತೆರಳುತ್ತಿದ್ದ ಲಾರಿಯೊಂದು ಹಠಾತ್ತನೆ ಬ್ರೇಕ್ ಹೊಡೆದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಸ್ಕೂಟರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ರಸ್ತೆಗೆಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನೇತ್ರಾವತಿ ಸೇತುವೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಕೋಟೆಕಾರ್ ಕೊರಗಜ್ಜನ ಕಟ್ಟೆ ಬಳಿ ನಿವಾಸಿ ಅಝೀನ್(21) ಮೃತ ಯುವಕ. ಅಝೀನ್ ಝೂಮೆಟೊ ಕಂಪನಿಯಲ್ಲಿ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ. ಕೋಟೆಕಾರಿನಿಂದ ಮಂಗಳೂರಿಗೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ನೇತ್ರಾವತಿ ಸೇತುವೆಯಲ್ಲಿ ಘಟನೆ ನಡೆದಿದೆ.
ಲಾರಿಯಲ್ಲಿದ್ದ ಪ್ಲಾಸ್ಟಿಕ್ ಬಾಕ್ಸ್ ಸಂಚಾರದ ವೇಳೆ ರಸ್ತೆಗೆ ಬಿದ್ದಿದ್ದು ಬಾಕ್ಸ್ ಹೆಕ್ಕಲೆಂದು ಲಾರಿ ಚಾಲಕ ಹಠಾತ್ತನೆ ಬ್ರೇಕ್ ಹೊಡೆದಿದ್ದಾನೆ. ಹಿಂದಿನಿಂದ ಬಂದ ಸ್ಕೂಟರ್ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಅಝೀನ್ ರಸ್ತೆಗೆಸೆಯಲ್ಪಟ್ಟು ಪ್ರಾಣ ಕಳಕೊಂಡಿದ್ದಾನೆ. ಮೃತ ಅಝೀನ್ ಕುಟುಂಬದ ಯುವಕನಾಗಿದ್ದ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.