ನವದೆಹಲಿ: ಜಗತ್ತನ್ನೇ ತಲ್ಲಣಗೊಳಿಸುವ Covid19 ಹರಡುವ ಟೈಮ್ ಬಾಂಬ್ ಆಗಲಿದೆ ಚೀನಾ ಎಂದು ಹನ್ನೆರಡು ವರ್ಷ ಹಿಂದೆಯೇ ಸೈಂಟಿಸ್ಟ್ಗಳು ಎಚ್ಚರಿಸಿದ್ದ ವಿಷಯ ಈಗ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಸದ್ಯ ಈ ಸೋಂಕಿಗೆ ಜಗತ್ತಿನಾದ್ಯಂತ 14,500ಕ್ಕೂ ಹೆಚ್ಚಿ ಜನ ಸಾವನ್ನಪ್ಪಿದ್ದು, 2.5 ಲಕ್ಷ ಸೋಂಕಿಗೆ ಒಳಗಾಗಿ ಸಂಕಟಪಡುತ್ತಿದ್ದಾರೆ.
ಜಾನ್ ಹಾಪ್ಕಿನ್ಸ್ ಯೂನಿವರ್ಸಿಟಿಯ ಕರೊನಾ ವೈರಸ್ ರಿಸೋರ್ಸ್ ಸೆಂಟರ್ನಲ್ಲಿ ಸಿಕ್ಕ 2007ರ ಕ್ಲಿನಿಕಲ್ ಮೈಕ್ರೋಬಯಾಲಜಿ ರಿವ್ಯೂಸ್ ನಲ್ಲಿ ಪ್ರಕಟವಾದ ಮಾಹಿತಿ ಪ್ರಕಾರ, Covid19 ಸೋಂಕನ್ನು ಹರಡುತ್ತಿರುವ ಹೊಸ ಕರೊನಾ ವೈರಸ್ ಅನ್ನು SARS-CoV-2 ಎಂದೂ ನೋವಲ್ ಕರೊನಾ ವೈರಸ್ ಎಂದೂ ಗುರುತಿಸಲಾಗಿದೆ. ಇದು 2003ರಲ್ಲಿ ಕಂಡು ಬಂದಿದ್ದ ಸಾರ್ಸ್ (SARS-Severe Acute Respiratory Syndrome) ಗಿಂತಲೂ ಇದು ಹೆಚ್ಚು ಗಂಭೀರವಾದ ಸೋಂಕು ಎಂಬುದು ಈಗಾಗಲೇ ಸಾಬೀತಾಗಿದೆ. ಅಂದು ಸಾರ್ಸ್ ಬಂದಾಗ ಜಗತ್ತಿನಾದ್ಯಂತ 8,000 ಜನ ಅಸ್ವಸ್ಥರಾಗಿ 800ರಷ್ಟು ಜನ ಸಾವನ್ನಪ್ಪಿದ್ದರು.
ಕರೊನಾ ವೈರಸ್ಗಳು ಜೆನಿಟಿಕ್ ಮರುಹೊಂದಾಣಿಕೆ ಮಾಡುವುದಕ್ಕೆ ಹೆಸರುವಾಸಿಗಳಾಗಿದ್ದು, ಈಗಿನ ಹೊಸ ವೈರಸ್ ರೂಪಾಂತರಕ್ಕೂ ಕಾರಣವಾಗಿದೆ. ಇದು ಈಗ ಜಗತ್ತನ್ನು ತಲ್ಲಣಗೊಳಿಸಿದೆ. ಹಾರ್ಸ್ಶೂ ಬಾವಲಿಗಳನ್ನು ಚೀನಾದಲ್ಲಿ ಹೆಚ್ಚು ತಿನ್ನುತ್ತಿದ್ದು, ಈ ಬಾವಲಿಗಳು SARS-CoV ಮಾದರಿಯ ವೈರಸ್ಗಳ ದಾಸ್ತಾನು ಕೇಂದ್ರಗಳು. ಈ ಬಗ್ಗೆ ಚೀನೀಯರು ಎಚ್ಚರಿಕೆ ವಹಿಸಬೇಕು. ವಿಲಕ್ಷಣ ಸಸ್ತನಿಗಳನ್ನು ತಿನ್ನುವ ಚೀನಿಯರ ಸಂಸ್ಕೃತಿ ಚೀನಾವನ್ನು ವೈರಸ್ ಹರಡುವ ಟೈಮ್ ಬಾಂಬ್ ಆಗಿ ರೂಪಿಸಲಿದೆ ಎಂಬ ಎಚ್ಚರಿಕೆ ಸಂದೇಶ ಜರ್ನಲ್ನಲ್ಲಿ ಪ್ರಕಟವಾದ ಲೇಖನದಲ್ಲಿದೆ. (ಏಜೆನ್ಸೀಸ್)