ನ್ಯೂಸ್

ಜಲಸಂಪನ್ಮೂಲ ಹೊಂದಿರುವ 2ನೇ ಭೂಮಿಯನ್ನು ಪತ್ತೆ ಮಾಡಿದ ವಿಜ್ಞಾನಿಗಳು| Scond-earth

ನವದೆಹಲಿ; ನಮ್ಮ ಸೌರವ್ಯೂಹದ ಬಗ್ಗೆ ಮತ್ತು ಬಾಹ್ಯಾಕಾಶದಲ್ಲಿ ಏನಿದೆ ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಇದಕ್ಕಾಗಿ ವಿಜ್ಞಾನಿಗಳು ವಿವಿಧ ರೀತಿಯ ಸಂಶೋಧನೆಗಳನ್ನು ಮಾಡುತ್ತಲೇ ಇದ್ದಾರೆ. ಅಂದಹಾಗೆ ಇದೀಗ ವಿಜ್ಞಾನಿಗಳು ಸೌರವ್ಯೂಹದಿಂದ ದೂರದಲ್ಲಿರುವ ಹೊಸ 'ಸೂಪರ್ ಅರ್ಥ್' ಗ್ರಹವೊಂದನ್ನು ಕಂಡುಹಿಡಿದಿದ್ದಾರೆ.

ಈ ಗ್ರಹಕ್ಕೆ ವಿಜ್ಞಾನಿಗಳು TOI-1846b ಎಂದು ಹೆಸರಿಟ್ಟಿದ್ದು, ಇದು ಭೂಮಿಯಿಂದ ಸುಮಾರು 154 ಬೆಳಕಿನ ವರ್ಷಗಳ ದೂರದಲ್ಲಿದೆ. ಈ ಹೊಸ ಗ್ರಹದ ಗಾತ್ರವು ಸುಮಾರು 1.792 ಭೂಮಿಯ ತ್ರಿಜ್ಯವಾಗಿದ್ದು, ಅದರ ತೂಕವು ಭೂಮಿಯ ತ್ರಿಜ್ಯಕ್ಕಿಂತ 4.4 ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ. ಇದನ್ನು 7.2 ಶತಕೋಟಿ ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ ಎಂದು ಲೇಖಕರು ತಿಳಿಸಿದ್ದಾರೆ.

ಈ ಆವಿಷ್ಕಾರವನ್ನು ನಾಸಾದ TESS (ಟ್ರಾನ್ಸಿಟಿಂಗ್ ಎಕ್ಸೋಪ್ಲಾನೆಟ್ ಸರ್ವೆ ಸ್ಯಾಟಲೈಟ್) ಕಾರ್ಯಾಚರಣೆಯ ಸಹಾಯದಿಂದ ಮಾಡಲಾಗಿದೆ. ಇನ್ನೂ ಈ 'ಸೂಪರ್ ಅರ್ಥ್' ಭೂಮಿಗಿಂತ ಎರಡು ಪಟ್ಟು ದೊಡ್ಡದಾಗಿದೆ ಮತ್ತು ನಾಲ್ಕು ಪಟ್ಟು ಭಾರವಾಗಿದೆ ಎಂದು ಹೇಳಲಾಗಿದೆ.

ಈ ಬಾಹ್ಯ ಗ್ರಹವು ಭೂಮಿಯ ಆರು ಪಟ್ಟು ದ್ರವ್ಯರಾಶಿಯನ್ನು ಹೊಂದಿದ್ದು, ಅದರ ಮೇಲ್ಮೈಯಲ್ಲಿ ದ್ರವ ನೀರನ್ನು ಹೊಂದಿರಬಹುದು ಎನ್ನಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಖಗೋಳಶಾಸ್ತ್ರಜ್ಞರು ಗುರುತಿಸಿರುವ ಸೂಪರ್-ಅರ್ಥ್‌ಗಳಲ್ಲಿ ಈ ಆವಿಷ್ಕಾರವು ಸಹ ಸೇರ್ಪಡೆಯಾಗಿದೆ. TOI-1846b ಗ್ರಹದ ತಾಪಮಾನ ಹೆಚ್ಚಾಗಿರುವುದರಿಂದ ಮಾನವರು ವಾಸಿಸಲು ಕಷ್ಟ ಎಂದು ಹೇಳಲಾಗಿದೆ.

TOI-1846b ಬಗ್ಗೆ ವಿಜ್ಞಾನಿಗಳು ಹೇಳಿದ್ದೇನು.?

(ಏಜೆನ್ಸೀಸ್)

ಈ ಗ್ರಹದ ಮೇಲ್ಮೈ ತಾಪಮಾನ ಸುಮಾರು 568 ಕೆಲ್ವಿನ್ (ಸುಮಾರು 295°C) ಎಂದು ಅಂದಾಜಿಸಲಾಗಿದೆ.

ಅದರ ಒಂದು ವರ್ಷ ಕೇವಲ ನಾಲ್ಕು ದಿನಗಳಿಗೆ ಸಮಾನ.

TOI-1846 b ತನ್ನ ನಕ್ಷತ್ರದ ಸುತ್ತ ತನ್ನ ಕಕ್ಷೆಯನ್ನು ಕೇವಲ 3.93 ದಿನಗಳಲ್ಲಿ ಪೂರ್ಣಗೊಳಿಸುತ್ತದೆ.